ಪುಣೆ: ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ವೈಫಲ್ಯ ಅನುಭವಿಸಿ ಅವಕಾಶ ವಂಚಿರಾಗಿದ್ದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರಾದರೂ ಕೇವಲ 2 ರನ್ಗಳಿಂದ ಶತಕ ವಂಚಿತರಾಗುವ ಮೂಲಕ ನಿರಾಶೆ ಅನುಭವಿಸಿದ್ದಾರೆ. ಆದರೂ 98 ರನ್ ಗಳಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಟಿ-20ಯಲ್ಲಿ ಬೆಂಚ್ ಕಾದಿದ್ದ ಧವನ್, ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿ ಮೊದಲ ವಿಕೆಟ್ಗೆ 64 ರನ್ಗಳ ಜೊತೆಯಾಟ ನೀಡಿದರು. ರೋಹಿತ್ ಔಟಾದ ನಂತರ ಬಿರುಸಿನ ಆಟವಾಡಿದ ಡೆಲ್ಲಿ ಡ್ಯಾಶರ್ ನಾಯಕ ಕೊಹ್ಲಿ ಜೊತೆಗೆ 2ನೇ ವಿಕೆಟ್ ಜೊತೆಯಾಟದಲ್ಲಿ 105 ರನ್ ಸೇರಿಸಿದರು.