ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ ಹೆಚ್ಚು ಶತಕ.. ಆರ್​ಸಿಬಿ ದಾಖಲೆ ಸರಿಗಟ್ಟಿದ ಕಿಂಗ್ಸ್​ಇಲೆವೆನ್ ಪಂಜಾಬ್​ - KLRahul

ಪಂಜಾಬ್ ಪರ ಶಾನ್ ಮಾರ್ಶ್​ , ಮಹೇಲಾ ಜಯ ವರ್ಧನೆ, ಪಾಲ್ ವಲ್ತಾಟಿ, ಆ್ಯಡಂ ಗಿಲ್​ಕ್ರಿಸ್ಟ್​, ಡೇವಿಡ್ ಮಿಲ್ಲರ್​, ವಿರೇಂದ್ರ ಸೆಹ್ವಾಗ್, ವೃದ್ಧಿಮಾನ್ ಸಹಾ, ಕ್ರಿಸ್​ ಗೇಲ್, ಹಾಸಿಮ್​ ಆಮ್ಲ(2), ಕೆಎಲ್​ ರಾಹುಲ್(2) ಹಾಗೂ ಮಯಾಂಕ್ ಅಗರ್​ವಾಲ್​ ಶತಕ ದಾಖಲಿಸಿದ್ದಾರೆ..

ಐಪಿಎಲ್​ನಲ್ಲಿ ಹೆಚ್ಚು ಶತಕ
ಐಪಿಎಲ್​ನಲ್ಲಿ ಹೆಚ್ಚು ಶತಕ

By

Published : Sep 28, 2020, 5:09 PM IST

ಶಾರ್ಜಾ :ಮಯಾಂಕ್ ಅಗರ್​ವಾಲ್ ಭಾನುವಾರ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಶತಕ ಸಿಡಿಸುತ್ತಿದ್ದಂತೆ ಪಂಜಾಬ್ ತಂಡ ಐಪಿಎಲ್​ನಲ್ಲಿ ಹೆಚ್ಚು ಶತಕ ಸಿಡಿಸಿದ ತಂಡ ಎಂಬ ಶ್ರೇಯವನ್ನು ಆರ್​ಸಿಬಿಯೊಂದಿಗೆ ಹಂಚಿಕೊಂಡಿತು.

ಈ ಐಪಿಎಲ್​ಗೂ ಪಂಜಾಬ್ ತಂಡದಿಂದ 11 ಶತಕಗಳು ದಾಖಲಾಗಿದ್ದವು. ಕಳೆದ ವಾರ ಕೆ ಎಲ್​ ರಾಹುಲ್​ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಅಜೇಯ 132 ರನ್​ಗಳಿಸಿದ್ದರು. ನಿನ್ನೆ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಮತ್ತೊಬ್ಬ ಕರ್ನಾಟಕದ ಬ್ಯಾಟ್ಸ್​ಮನ್​ ಮಯಾಂಕ್ ಅಗರ್​ವಾಲ್​ 106 ರನ್​ ಗಳಿಸಿದ್ದರು. ಇದು ಐಪಿಲ್​ ಇತಿಹಾಸದಲ್ಲಿ ಪಂಜಾಬ್ ಪರ ದಾಖಲಾದ 13ನೇ ಶತಕವಾಗಿತ್ತು.

ಐಪಿಎಲ್​ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಹೆಚ್ಚು ಶತಕ ಸಿಡಿಸಿದ ತಂಡ ಎನಿಸಿತ್ತು. ವಿರಾಟ್​ ಕೊಹ್ಲಿ 5, ಕ್ರಿಸ್​ ಗೇಲ್ 5 ಹಾಗೂ ಎಬಿಡಿ ವಿಲಿಯರ್ಸ್​ 2 ಹಾಗೂ ಮನೀಶ್ ಪಾಂಡೆ 1 ಶತಕ ಸಿಡಿಸಿದ್ದರು.

ಪಂಜಾಬ್ ಪರ ಶಾನ್ ಮಾರ್ಶ್​, ಮಹೇಲಾ ಜಯವರ್ಧನೆ, ಪಾಲ್ ವಲ್ತಾಟಿ, ಆ್ಯಡಂ ಗಿಲ್​ಕ್ರಿಸ್ಟ್​, ಡೇವಿಡ್ ಮಿಲ್ಲರ್​, ವಿರೇಂದ್ರ ಸೆಹ್ವಾಗ್, ವೃದ್ಧಿಮಾನ್ ಸಹಾ, ಕ್ರಿಸ್​ ಗೇಲ್, ಹಾಸಿಮ್​ ಆಮ್ಲ(2), ಕೆ ಎಲ್​ ರಾಹುಲ್(2) ಹಾಗೂ ಮಯಾಂಕ್ ಅಗರ್​ವಾಲ್​ ಶತಕ ದಾಖಲಿಸಿದ್ದಾರೆ.

ಐಪಿಎಲ್​ನಲ್ಲಿ ಹೆಚ್ಚು ಶತಕ ಸಿಡಿಸಿದ ತಂಡಗಳು

  • ಕಿಂಗ್ಸ್​ ಇಲೆವೆನ್ ಪಂಜಾಬ್​ -13
  • ರಾಯಲ್ ಚಾಲೆಂಜರ್ಸ್​ ಬೆಂಗಳೂರು-13
  • ಚೆನ್ನೈ ಸೂಪರ್ ಕಿಂಗ್ಸ್​- 08
  • ಡೆಲ್ಲಿ ಕ್ಯಾಪಿಟಲ್ಸ್​/ಡೇರ್​ಡೇವಿಲ್ಸ್​-08
  • ರಾಜಸ್ಥಾನ್​ ರಾಯಲ್ಸ್​-06

ABOUT THE AUTHOR

...view details