ಮೌಂಟ್ ಮಾಂಗ್ನುಯಿ:ನ್ಯೂಜಿಲೆಂಡ್ ಪ್ರವಾಸದಲ್ಲಿ ಗೆಲುವಿನ ಓಟ ಮುಂದುವರೆಸಿರುವ ಟೀಂ ಇಂಡಿಯಾ 5ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲೂ ವಿಜಯ ಸಾಧಿಸಿದೆ. ಈ ಐತಿಹಾಸಿಕ ಸರಣಿ ಗೆಲುವಿನ ಮೂಲಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹೊಸ ಮೈಲುಗಲ್ಲು ತಲುಪಿದ್ದಾರೆ.
ಕಿವೀಸ್ ವಿರುದ್ಧ ಐತಿಹಾಸಿಕ ಟಿ-20 ಸರಣಿ ಜಯ... ಹೊಸ ದಾಖಲೆ ಬರೆದ ಕ್ಯಾಪ್ಟನ್! - ವಿರಾಟ್ ಕೊಹ್ಲಿ ದಾಖಲೆ
ಕಿವೀಸ್ ಪ್ರವಾಸದಲ್ಲಿರುವ ಭಾರತ ತಂಡ ಗೆಲುವಿನ ಓಟ ಮುಂದುವರೆಸಿದ್ದು, 5ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲೂ ವಿಜಯ ಸಾಧಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಈ ಐತಿಹಾಸಿಕ ಸರಣಿ ಗೆಲುವಿನ ಮೂಲಕ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆ ಬರೆದಿದ್ದಾರೆ.
![ಕಿವೀಸ್ ವಿರುದ್ಧ ಐತಿಹಾಸಿಕ ಟಿ-20 ಸರಣಿ ಜಯ... ಹೊಸ ದಾಖಲೆ ಬರೆದ ಕ್ಯಾಪ್ಟನ್! ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆ, Most bilateral series wins as captain for virat kohli](https://etvbharatimages.akamaized.net/etvbharat/prod-images/768-512-5933158-thumbnail-3x2-virat.jpg)
ವಿರಾಟ್ ಕೊಹ್ಲಿ ಒಟ್ಟಾರೆ 15 ಟ್ವೆಂಟಿ-20 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿ ಅತಿಹೆಚ್ಚು ಗೆಲುವು ಕಂಡ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 15 ಸರಣಿಗಳಲ್ಲಿ ಮುಂದಾಳತ್ವ ವಹಿಸಿದವರಲ್ಲಿ ವಿರಾಟ್ 10 ಸರಣಿ ಗೆದ್ದ ದಾಖಲೆ ಬರೆದರು. ದ.ಆಫ್ರಿಕಾದ ಫಾಫ್ ಡುಪ್ಲೆಸಿಸ್ ನಾಯಕನಾಗಿ 9 ಸರಣಿ ಗೆಲುವು ಕಂಡಿದ್ದರೆ, ಇಂಗ್ಲೆಂಡ್ನ ಇಯಾನ್ ಮಾರ್ಗನ್ 7 ಸರಣಿ ಜಯ ಸಾಧಿಸಿದ ದಾಖಲೆ ಹೊಂದಿದ್ದಾರೆ. ಇನ್ನುಳಿದಂತೆ ವೆಸ್ಟ್ ಇಂಡೀಸ್ನ ಡಾರೆನ್ ಸಮಿ 6 ಹಾಗೂ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ 5 ಟಿ-20 ಸರಣಿ ಗೆದ್ದಿದ್ದಾರೆ.
ನ್ಯೂಜಿಲೆಂಡ್ನಲ್ಲಿ ಟಿ-20 ಸರಣಿಯಲ್ಲಿ ಅದ್ಭುತ ನಾಯಕತ್ವದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದಿರುವ ಕೊಹ್ಲಿ, ಏಕದಿನ ಸರಣಿಯಲ್ಲೂ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಫೆ.5ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ.