ಕರ್ನಾಟಕ

karnataka

By

Published : Oct 8, 2020, 11:52 PM IST

ETV Bharat / sports

ಐಪಿಎಲ್​ ಅತಿ ಹೆಚ್ಚು 50 ಪ್ಲಸ್​:ವಿಶೇಷ ದಾಖಲೆ ಬರೆದ ಡೇವಿಡ್ ವಾರ್ನರ್​

ಬೈರ್ಸ್ಟೋವ್​ 97 ರನ್​ಗಳಿಗೆ ಔಟಾದರೆ, ಡೇವಿಟ್ ವಾರ್ನರ್​ 40 ಎಸೆತಗಳಲ್ಲಿ ಒಂದು ಸಿಕ್ಸರ್​ ಹಾಗೂ 5 ಬೌಂಡರಿ ಸಹಿತ 52 ರನ್​ಗಳಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಬಾರಿ 50 ಅಥವಾ 50ಕ್ಕಿಂತ ರನ್​ಗಳನ್ನು 50 ನೇ ಬಾರಿಸಿದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡರು.

ಐಪಿಎಲ್​ ಅತಿ ಹೆಚ್ಚು 50 ಪ್ಲಸ್
ಐಪಿಎಲ್​ ಅತಿ ಹೆಚ್ಚು 50 ಪ್ಲಸ್

ದುಬೈ: ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಡೇವಿಡ್ ವಾರ್ನರ್​ ಕಿಂಗ್ಸ್​ ಇಲೆವೆನ್​ ಪಂಜಾಬ್ ವಿರುದ್ಧ ತಮ್ಮ 50 ನೇ ಅರ್ಧಶತಕ(50+) ಪೂರೈಸಿದರು.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಡ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಡೇವಿಡ್ ವಾರ್ನರ್​ ಹಾಗೂ ಬೈರ್ಸ್ಟೋವ್​ 160 ರನ್​ಗಳ ಜೊತೆಯಾಟ ನೀಡಿದ್ದರು.

ಬೈರ್ಸ್ಟೋವ್​ 97 ರನ್​ಗಳಿಗೆ ಔಟಾದರೆ, ಡೇವಿಟ್ ವಾರ್ನರ್​ 40 ಎಸೆತಗಳಲ್ಲಿ ಒಂದು ಸಿಕ್ಸರ್​ ಹಾಗೂ 5 ಬೌಂಡರಿ ಸಹಿತ 52 ರನ್​ಗಳಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಬಾರಿ 50 ಅಥವಾ 50ಕ್ಕಿಂತ ರನ್​ಗಳನ್ನು 50 ನೇ ಬಾರಿಸಿದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡರು.

132 ಪಂದ್ಯಗಳನ್ನಾಡಿರುವ ವಾರ್ನರ್​ 46 ಅರ್ಧಶತಕ ಹಾಗೂ 4 ಶತಕ ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿರುವ ವಿರಾಟ್​ ಕೊಹ್ಲಿ 42( 37 ಅರ್ಧಶತಕ, 5 ಶತಕ) ಸುರೇಶ್​ ರೈನಾ 39 (38 ಅರ್ಧಶತಕ ಹಾಗೂ 1 ಶತಕ), ರೋಹಿತ್ ಶರ್ಮಾ 39( 38 ಅರ್ಧಶತಕ ಹಾಗೂ 1 ಶತಕ) ನಂತರದ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details