ಕರ್ನಾಟಕ

karnataka

ETV Bharat / sports

ಗಬ್ಬಾ ಮೈದಾನದಲ್ಲೂ ಸಿರಾಜ್​, ವಾಷಿಂಗ್ಟನ್​ ಸುಂದರ್​ಗೆ ಜನಾಂಗೀಯ ನಿಂದನೆ - ಮೊಹಮ್ಮದ್ ಸಿರಾಜ್​ಗೆ ನಿಂದನೆ

ಆಸ್ಟ್ರೇಲಿಯಾ ವಿರುದ್ಧ ಗಬ್ಬಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್​ಗೆ ಮತ್ತೊಮ್ಮೆ ಜನಾಂಗೀಯ ನಿಂದನೆ ಅನುಭವ ಆಗಿದೆ.

Team India
Team India

By

Published : Jan 15, 2021, 4:31 PM IST

ಗಬ್ಬಾ(ಆಸ್ಟ್ರೇಲಿಯಾ): ಸಿಡ್ನಿ ಮೈದಾನದಲ್ಲಿ ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್​ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್​ಗೆ ಜನಾಂಗೀಯ ನಿಂದನೆ ಮಾಡಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಇಂದಿನಿಂದ ಗಬ್ಬಾ ಮೈದಾನದಲ್ಲಿ ಆರಂಭಗೊಂಡಿರುವ ಅಂತಿಮ ಟೆಸ್ಟ್​ ಪಂದ್ಯದಲ್ಲೂ ಸಿರಾಜ್ ಹಾಗೂ ವಾಷಿಂಗ್ಟನ್​ ಸುಂದರ್​ಗೆ ಇಂತಹ ಘಟನೆಯ ಅನುಭವ ಆಗಿದೆ.

ಇದನ್ನೂ ಓದಿ: ಸಿರಾಜ್​ರನ್ನು ಪ್ರೇಕ್ಷಕರು ಕಂದು ನಾಯಿ, ದೊಡ್ಡ ಕೋತಿ ಎಂದು ನಿಂದಿಸಿದ್ದಾರೆ : ಬಿಸಿಸಿಐ ಮೂಲ

ಮೈದಾನದಲ್ಲಿ ಕ್ಷೇತ್ರ ರಕ್ಷಣೆ ಮಾಡ್ತಿದ್ದ ವೇಳೆ ಅಭಿಮಾನಿಗಳ ಗುಂಪೊಂದು ಅವರಿಗೆ ಪದೇ ಪದೆ 'ಗ್ರಬ್ಸ್​​' ಎಂದು ಕರೆದು ಲೇವಡಿ ಮಾಡಿದೆ. ಇದರ ಜತೆಗೆ ಮೊಹಮ್ಮದ್​ ಸಿರಾಜ್​ಗೆ “Que Shiraz, Shiraz” to the tune of Que Sera, Sera ಎಂದು ಕರೆದಿದ್ದಾರೆ. ಸಿಡ್ನಿ ಮೈದಾನದಲ್ಲಿ ನಡೆದ ಜನಾಂಗೀಯ ನಿಂದನೆ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಇದರ ಬಗ್ಗೆ ಕ್ಷಮೆಯಾಚನೆ ಮಾಡಿತ್ತು.

ಗಬ್ಬಾ ಮೈದಾನದಲ್ಲಿ ಇಂದಿನಿಂದ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ ಮೊದಲ ದಿನಾದ ಅಂತ್ಯಕ್ಕೆ 5 ವಿಕೆಟ್ ​ನಷ್ಟಕ್ಕೆ 274 ರನ್​ ಗಳಿಕೆ ಮಾಡಿದೆ.

ABOUT THE AUTHOR

...view details