ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಕೊನೆಯ ದಿನ ಐದು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ಮೊಹಮ್ಮದ್ ಶಮಿಯನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸ್ವಿಂಗ್ ಬೌಲಿಂಗ್ನ ಕಿಂಗ್ ಎಂದು ಕರೆದಿದ್ದಾರೆ.
ಅಖ್ತರ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಶಮಿ, ವಿಶ್ವಕಪ್ ಸೆಮಿಫೈನಲ್ನಲ್ಲಿ ಕಿವೀಸ್ ವಿರುದ್ಧ ಸೋತ ನಂತರ ಅಖ್ತರ್ಗೆ ಕರೆ ಮಾಡಿ ನನ್ನಿಂದ ದೇಶಕ್ಕೆ ಏನು ಮಾಡಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರಂತೆ. ಆ ವೇಳೆ ಶಮಿಯನ್ನು ಸಮಾಧಾನ ಪಡಿಸಿದ್ದ ಅಖ್ತರ್ ಮೊದಲು ಫಿಟ್ನೆಸ್ ಕಾಪಾಡಿಕೊಳ್ಳಿ. ಮುಂದಿನ ದಿನಗಳಲ್ಲಿ ಭಾರತದಲ್ಲೇ ಹಲವು ಸರಣಿಗಳು ನಡೆಯಲಿದ್ದು, ನೀನು ರಿವರ್ ಸ್ವಿಂಗ್ ಅಸ್ತ್ರವನ್ನು ಬಳಸು ಎಂದು ಸಲಹೆ ನೀಡಿದ್ದರೆಂತೆ.
ಉಪ ಖಂಡದಲ್ಲಿ ಶಮಿ ಮಾತ್ರ ಸೀಮ್ ಮತ್ತು ಸ್ವಿಂಗ್ ಬೌಲಿಂಗ್ ಕೌಶಲ್ಯಹೊಂದಿರುವ ಬೌಲರ್. ಅವರು ಎದುರಾಳಿ ಬ್ಯಾಟ್ಸ್ಮನ್ಗಳನ್ನು ತನ್ನ ವೇಗದ ಬೌಲಿಂಗ್ ದಾಳಿ ಮೂಲಕ ಪೆವಿಲಿಯನ್ಗಟ್ಟುವುದನ್ನು ಕರಗತ ಮಾಡಿಕೊಂಡಿದ್ದಾರೆ. ನೀನೊಬ್ಬ ಸ್ವಿಂಗ್ ಬೌಲಿಂಗ್ನ ಕಿಂಗ್ ಎಂದು ಈ ಹಿಂದೆ ಹೇಳಿದ್ದೆ, ಅದನ್ನು ಅವರು ಇದೀಗ ತೋರಿಸಿದ್ದಾರೆ ಎಂದು ಅಖ್ತರ್ ಹೊಗಳಿದ್ದಾರೆ.
ಶಮಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಬುವಾಮ ,ಡುಪ್ಲೆಸಿಸ್, ಡಿಕಾಕ್ ಸೇರಿಂದರೆ 5 ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದ್ದರು.
ಇನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬೌಲರ್ಗಳಿಗೆ ತುಂಬಾ ಸ್ವಾತಂತ್ರ್ಯ ನೀಡುವುದರಿಂದಲೇ ತಂಡದ ಯಶಸ್ಸಿಗೆ ಕಾರಣವಾಗಿದೆ. ಅವರೊಬ್ಬ ಬೌಲರ್ಗಳ ನೆಚ್ಚಿನ ನಾಯಕ ಎಂದಿದ್ದಾರೆ. ಎರಡೂ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನ ಮುಂದಿನ ಅತ್ಯುತ್ತಮ ಆಟಗಾರ ಆಗಲಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.