ಕರ್ನಾಟಕ

karnataka

ETV Bharat / sports

ವಿಶ್ವಕಪ್​ನಲ್ಲಿ 32 ವರ್ಷಗಳ ನಂತರ ಹ್ಯಾಟ್ರಿಕ್​ ವಿಕೆಟ್​ ಪಡೆದ ಶಮಿ!

ಅಫ್ಘಾನಿಸ್ತಾನದ ವಿರುದ್ಧ ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆಯುವ ಮೂಲಕ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಎರಡನೇ ಭಾರತೀಯ ಹಾಗೂ ವಿಶ್ವದ 10ನೇ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಶಮಿ

By

Published : Jun 22, 2019, 11:57 PM IST

ಸೌತಮ್​ಟನ್​: ಅಫ್ಘಾನಿಸ್ತಾನದ ವಿರುದ್ಧ ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆಯುವ ಮೂಲಕ ಮೊಹಮ್ಮದ್ ಶಮಿ, ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಎರಡನೇ ಭಾರತೀಯ ಹಾಗೂ ವಿಶ್ವದ 10ನೇ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕೊನೆಯ ಓವರ್​ನಲ್ಲಿ ಅಫ್ಘಾನಿಸ್ತಾನದ ಗೆಲುವಿಗೆ 16 ರನ್​ಗಳ ಅಗತ್ಯವಿದ್ದಾಗ ಬೌಲಿಂಗ್​ ಮಾಡಲು ಬಂದ ಶಮಿ ಮೊದಲ ಎಸೆತದಲ್ಲಿ ಮಾತ್ರ ರನ್​ 4 ಬಿಟ್ಟುಕೊಟ್ಟರು. ನಂತರದ ಎಸೆತದಲ್ಲಿ ಯಾವುದೇ ರನ್​ ಬರಲಿಲ್ಲ. 3,4 ಹಾಗೂ 5ನೇ ಎಸೆತದಲ್ಲಿ ಕ್ರಮವಾಗಿ ಮೊಹಮ್ಮದ್​ ನಬಿ, ಅಫ್ಟಾಬ್​ ಆಲಂ ಹಾಗೂ ಮುಜೀಬ್​ ಉರ್​ ರಹಮಾನ್​ ವಿಕೆಟ್​ ಪಡೆದು ಭಾರತಕ್ಕೆ ಗೆಲುವು ತಂದುಕೊಟ್ಟರು.

1987 ರಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದಿದ್ದ ಚೇತನ್​ ಶರ್ಮಾ

ಶಮಿಗೂ ಮೊದಲು 1987 ರಲ್ಲಿ ಭಾರತದ ಪರ ಚೇತನ್​ ಶರ್ಮಾ ನ್ಯೂಜಿಲ್ಯಾಂಡ್​ ವಿರುದ್ಧ ಹ್ಯಾಟ್ರಿಕ್​ ವಿಕೆಟ್​ ಪಡೆದಿದ್ದರು. ಇದು ವಿಶ್ವಕಪ್​ ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್ ದಾಖಲೆ ಆಗಿತ್ತು.

ಚೇತನ್​ ಶರ್ಮಾ ತಮ್ಮ ಬೌಲಿಂಗ್​ನಲ್ಲಿ ಕೆನ್​ ರುಥರ್​ಫೋರ್ಡ್​,ಇಯಾನ್​ ಸ್ಮಿತ್​ ಹಾಗೂ ಎವೆನ್​ ಚಾಟ್​ಫೀಲ್ಡ್​ರನ್ನು ಬೌಲ್ಡ್​ ಮಾಡುವ ಮೂಲಕ ವಿಶ್ವಕಪ್​ನಲ್ಲಿ ಮೊದಲ ಹ್ಯಾಟ್ರಿಕ್​ ಸಾಧನೆ ಮಾಡಿದ್ದರು.

ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಸಾಧನೆ ಮಾಡಿದ ಬೌಲರ್​ಗಳು:
ಚೇತನ್ ​ಶರ್ಮಾ 1987
ಸಕ್ಲೈನ್​ ಮುಸ್ತಾಕ್​ 1999
ಚಮಿಂದಾ ವಾಸ್​ 2003
ಬ್ರೆಟ್​ ಲೀ 2003
ಲಸಿತ್​ ಮಲಿಂಗಾ 2007
ಕೆಮರ್​ ರೋಚ್​ 2011
ಲಸಿತ್​ ಮಲಿಂಗಾ 2011
ಸ್ಟೀಫನ್​ಫಿನ್​ 2015
ಜೆಪಿ ಡುಮಿನಿ 2015
ಮೊಹಮ್ಮದ್​ ಶಮಿ 2019

ABOUT THE AUTHOR

...view details