ಕರ್ನಾಟಕ

karnataka

ETV Bharat / sports

ಕೊಹ್ಲಿ ಉತ್ತಮ ನಾಯಕನಾಗಬೇಕಾದರೆ ಆಟಗಾರರ ಬೆನ್ನಿಗೆ ನಿಲ್ಲಬೇಕು: ಮೊಹಮ್ಮದ್​ ಕೈಫ್​

ಕೊಹ್ಲಿ ತಂಡದ ಆಟಗಾರರ ಮೇಲೆ ಹೆಚ್ಚು ವಿಶ್ವಾಸ ಹೊಂದಿಲ್ಲ, ಅವರು ಆಟಗಾರರನ್ನ ಬ್ಯಾಕ್ - ​ಅಪ್ ಮಾಡುವುದಿಲ್ಲ, ತಂಡದ ಆಯ್ಕೆಯಲ್ಲಿ ಕೊಹ್ಲಿ, ಸಾಕಷ್ಟು ಪ್ರಯೋಗ ಮಾಡುತ್ತಾರೆ.

ಮೊಹಮ್ಮದ್​ ಕೈಫ್​
ಮೊಹಮ್ಮದ್​ ಕೈಫ್​

By

Published : May 18, 2020, 4:44 PM IST

ಮುಂಬೈ:ವಿರಾಟ್​ ಕೊಹ್ಲಿ ಬ್ಯಾಟಿಂಗ್​ನಲ್ಲಿ ಎಷ್ಟೇ ರನ್​ಗಳಿಸಿದ್ದರೂ, ನಾಯಕತ್ವದಲ್ಲಿ ಮಾಡುವ ಕೆಲವು ದುಡುಕು ನಿರ್ಧಾರಗಳ ಬಗ್ಗೆ, ಕೆಲ ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಆ ಸಾಲಿಗೆ ಮಾಜಿ ಆಟಗಾರ ಮೊಹಮ್ಮದ್​ ಕೈಫ್​ ಕೂಡ ಸೇರಿಕೊಂಡಿದ್ದಾರೆ.

ಕೊಹ್ಲಿ ತಂಡದ ಆಟಗಾರರ ಮೇಲೆ ಹೆಚ್ಚು ವಿಶ್ವಾಸ ಹೊಂದಿಲ್ಲ, ಅವರು ಆಟಗಾರರನ್ನ ಬ್ಯಾಕ್​ಅಪ್ ಮಾಡುವುದಿಲ್ಲ, ತಂಡದ ಆಯ್ಕೆಯಲ್ಲಿ ಕೊಹ್ಲಿ, ಸಾಕಷ್ಟು ಪ್ರಯೋಗ ಮಾಡುತ್ತಾರೆ. ಈ ಹಿಂದೆ ಕೊಹ್ಲಿ ಸಾಕಷ್ಟು ಕಾಂಬಿನೇಷನ್ ಪ್ರಯೋಗ ಮಾಡಿದ್ದಾರೆ. ಸಾಮರ್ಥ್ಯ ಇಲ್ಲದ ಆಟಗಾರರನ್ನೂ ಕಳೆದ ವಿಶ್ವಕಪ್​ಗೆ ಆಯ್ಕೆ ಮಾಡಿಕೊಂಡಿದ್ದರು. ಕೊಹ್ಲಿ ತಂಡದ ಆಟಗಾರರನ್ನ ಬೆಂಬಲಿಸಬೇಕು. ಒಂದು ವೇಳೆ, ಆಟಗಾರ ಫಾರ್ಮ್ ಕಳೆದುಕೊಂಡಿದ್ರೆ, ಆತನಿಗೆ ಸಪೋರ್ಟ್ ಮಾಡಬೇಕು. ಆಗಲೇ ಕೊಹ್ಲಿ, ಉತ್ತಮ ನಾಯಕನಾಗಲು ಸಾಧ್ಯ ಎಂದು ಕೈಫ್​ ಹೇಳಿದ್ದಾರೆ.

ವಿಕೆಟ್​ ಕೀಪರ್ ಆಯ್ಕೆಯಲ್ಲೂ ಕೊಹ್ಲಿ ಸಾಕಷ್ಟು ಆಟಗಾರರನ್ನು ಬದಲಾಯಿಸಿದ್ದಾರೆ. ಧೋನಿ ಜಾಗಕ್ಕೆ ಎಂದು ಒಬ್ಬ ಪರ್ಮನೆಂಟ್​ ವಿಕೆಟ್​ ಕೀಪರ್​ ಅಗತ್ಯವಿದೆ. ಕೆಎಲ್​ ರಾಹುಲ್​ ಬ್ಯಾಕಪ್​ ವಿಕೆಟ್​ ಕೀಪರ್​ ಆಗಿದ್ದಾರೆ. ಆದರೆ, ಅವರನ್ನ ಪರ್ಮನೆಂಟ್​ ವಿಕೆಟ್​ ಕೀಪರ್​ ಆಗಿ ನೋಡಲು ಸಾಧ್ಯವಿಲ್ಲ. ನೀವು ಧೋನಿ ಬಿಟ್ಟು ಪಂತ್​ಗೆ ಬೆಂಬಲ ನೀಡುವುದಾದರೆ, ಕೊಹ್ಲಿ ಪಂತ್​ ಹಿಂದೆ ನಿಲ್ಲಬೇಕು. ಆತ ತಂಡದ ವಾಟರ್ ಬಾಯ್​ ಅಲ್ಲ ಎಂದು ಹೆಲೋ ಆ್ಯಪ್​​ಗೆ ನೀಡಿದ ಸಂದರ್ಶನದಲ್ಲಿ ಕೈಫ್​ ಹೇಳಿದ್ದಾರೆ.

ಇನ್ನು 2019 ವಿಶ್ವಕಪ್​ನಲ್ಲಿ ಅನುಭವಿ ಅಂಬಾಟಿ ರಾಯುಡು ಅವರನ್ನು ತಂಡದಿಂದ ಕೈಬಿಟ್ಟು ವಿಜಯ್​ ಶಂಕರ್​ರಿಗೆ ಅವಕಾಶಕೊಟ್ಟಿದ್ದರು. ಇನ್ನು ಫೈನಲ್​ ಪಂದ್ಯದಲ್ಲೂ ಧೋನಿಯನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿಸಿದಾಗಲೂ ಕೂಡ ಕೊಹ್ಲಿ ನಾಯಕತ್ವನ್ನು ಪ್ರಶ್ನಿಸಲಾಗಿತ್ತು.

ABOUT THE AUTHOR

...view details