ನವದೆಹಲಿ: ಭಾರತ ಕಂಡ ಶ್ರೇಷ್ಠ ಫೀಲ್ಡರ್ ಆಗಿರುವ ಮೊಹಮ್ಮದ್ ಕೈಫ್ ಒಬ್ಬ ಉತ್ತಮ ಫೀಲ್ಡರ್ ಆಗಲು ಹೇಗೆ ಅಭ್ಯಾಸ ಮಾಡಬೇಕು ಎಂದು ತಿಳಿಸಿಕೊಟ್ಟಿದ್ದಾರೆ.
ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮೊಹಮ್ಮದ್ ಕೈಫ್ ಹಾಗೂ ಯುವರಾಜ್ ಸಿಂಗ್ ಅದ್ಭುತ ಫಿಲ್ಡರ್ಗಳಾಗಿದ್ದಾರೆ. ಇವರು 30 ಅಡಿ ಸರ್ಕಲ್ನಲ್ಲಿ ನಿಂತು ಸಾಕಷ್ಟು ರನ್ ಉಳಿಸಿಕೊಟ್ಟಿದ್ದಾರೆ. ಸಾಕಷ್ಟು ಆಕರ್ಷಕ ಡೈವ್ ಹಾಗೂ ಸಾಕಷ್ಟು ಕ್ಯಾಚ್ಗಳನ್ನು ಹಿಡಿದಿದ್ದಾರೆ. ಭಾರತದ ಮಾಜಿ ಬ್ಯಾಟ್ಸ್ಮನ್ ಕೈಫ್ ಒಬ್ಬ ಉತ್ತಮ ಕ್ಷೇತ್ರ ರಕ್ಷಕನಾಗಲು ಬೇಕಿರುವ ಗುಣಗಳನ್ನು ತಿಳಿಸಿಕೊಟ್ಟಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಫೀಲ್ಡಿಂಗ್ ಕೂಡ ಬ್ಯಾಟಿಂಗ್ ಇದ್ದಂತೆ ಎಂದಿದ್ದಾರೆ. ಪ್ರಸ್ತುತ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ವಯಸ್ಸಿಗೆ ತಕ್ಕಂತೆ ಫೀಲ್ಡಿಂಗ್ನಲ್ಲಿ ಸುಧಾರಣೆ ಕಾಣುತ್ತಿದ್ದಾರೆ. ಒಬ್ಬ ಪರಿಪೂರ್ಣ ಬ್ಯಾಟ್ಸ್ಮನ್ ಆಗಲು ಬೌನ್ಸರ್ಗೆ ಆಡುವುದು, ಡ್ರೈವ್ ಮಾಡುವುದು, ಫುಲ್ ಶಾಟ್ ಮಾಡುವುದರ ಜೊತೆಗೆ ಸ್ಪಿನ್ ಬೌಲಿಂಗ್ಗೆ ಆಡುವುದು ಹಾಗೂ ಕ್ರೀಸ್ನಲ್ಲಿ ತಾಳ್ಮೆಯಿಂದ ಆಡವುದನ್ನು ಕಲಿತಿರಬೇಕು.
ಹಾಗೆಯೇ ಒಬ್ಬರು ಉತ್ತಮವಾದ ಫೀಲ್ಡರ್ ಆಗಲು ವೇಗವಾಗಿ ಓಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ದೀರ್ಘವಾಗಿ ಫೀಲ್ಡಿಂಗ್ ಅಭ್ಯಾಸ ಮಾಡಬೇಕು. ಎಲ್ಲಕ್ಕಿಂತ ಮಿಗಿಲಾಗಿ ತಾವೊಬ್ಬ ಉತ್ತಮ ಫೀಲ್ಡರ್ ಆಗುವ ಗೀಳನ್ನು ಹೊಂದಿರಬೇಕು.
ಪಂದ್ಯ ಕೇವಲ 30 ನಿಮಿಷದಲ್ಲಿ ಮುಗಿಯುವುದಿಲ್ಲ. ಹಾಗಾಗಿ ಹೆಚ್ಚು ಸಮಯದವೆರೆಗೆ ಗ್ರೌಂಡ್ನಲ್ಲಿ ಉಳಿಯುವ ಸಾಮರ್ಥ್ಯವನ್ನು ಹೊಂದಿರಬೇಕು. ಉತ್ತಮ ಗುಣಮಟ್ಟದ ತಂತ್ರಗಾರಿಕೆ, ಉತ್ತಮ ಕಣ್ಣಿನ ಸಮನ್ವಯವನ್ನು ಹೊಂದಿರಬೇಕು. ನೀವು ಹೆಚ್ಚು ಮೈದಾನದಲ್ಲಿ ಸಮಯ ಕಳೆದಷ್ಟು ನೀವು ಉತ್ತಮ ಫೀಲ್ಡರ್ ಆಗಲಿದ್ದೀರಾ. ಆದರೆ ಸಮಯವನ್ನು ಬದಿಗೊತ್ತಿ ಅಭ್ಯಾಸ ಮಾಡಬೇಕು ಎಂದು ಕೈಫ್ ಸಲಹೆ ನೀಡಿದ್ದಾರೆ.