ಕರ್ನಾಟಕ

karnataka

ETV Bharat / sports

ಸಂಶಯಾಸ್ಪದ ಬೌಲಿಂಗ್: ಇಂಗ್ಲೆಂಡ್​ ಕ್ರಿಕೆಟ್ ಬೋರ್ಡ್​ನಿಂದ ಮೊಹಮ್ಮದ್​ ಹಫೀಜ್​​ಗೆ ನಿಷೇಧ ಶಿಕ್ಷೆ

ಸಂಶಯಾಸ್ಪದ ಬೌಲಿಂಗ್ ಹಿನ್ನೆಲೆಯಲ್ಲಿ ಪಾಕ್ ಅಲ್​ರೌಂಡರ್​ ಮೊಹಮ್ಮದ್​ ಹಫೀಜ್​ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ 2 ವರ್ಷಗಳ ನಿಷೇಧ ಹೇರಿದೆ.

By

Published : Dec 25, 2019, 8:16 AM IST

Updated : Dec 25, 2019, 11:50 AM IST

ಮೊಹಮ್ಮದ್​ ಹಫೀಜ್​​ಗೆ 2 ವರ್ಷ ನಿಷೇಧ,Pak all-rounder Mohammad Hafeez banned
ಮೊಹಮ್ಮದ್​ ಹಫೀಜ್​​ಗೆ 2 ವರ್ಷ ನಿಷೇಧ

ಲಂಡನ್ (ಇಂಗ್ಲೆಂಡ್): ಅನುಮಾನಾಸ್ಪದ ಬೌಲಿಂಗ್​ ಸಾಭೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ಆಲ್​ರೌಂಡರ್​ ಮೊಹಮ್ಮದ್​ ಹಫೀಜ್​ಗೆ ಇಂಗ್ಲೆಂಡ್​ನಲ್ಲಿ ನಡೆಯುವ ಯಾವುದೇ ಟೂರ್ನಿಗಳಲ್ಲಿ ಬೌಲಿಂಗ್​ ಮಾಡದಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ 2 ವರ್ಷಗಳ ಕಾಲ ನಿಷೇಧ ಹೇರಿದೆ.

ಆಗಸ್ಟ್​ 30 ರಂದು ಇಂಗ್ಲೆಂಡ್​ನಲ್ಲಿ ನಡೆದಿದ್ದ ವಿಟಾಲಿಟಿ ಬ್ಲಾಸ್ಟ್ (Vitality Blast)​ 20 ಲೀಗ್​ನ ಪಂದ್ಯದಲ್ಲಿ ಮೊಹಮ್ಮದ್​ ಹಫೀಜ್ ಬೌಲಿಂಗ್​ ಅನುಮಾನಾಸ್ಪದವಾಗಿದೆ ಎಂದು ಅಂಪೈರ್​ ವರದಿ ಮಾಡಿದ್ದರು. ಈ ಬಗ್ಗೆ ಪರೀಕ್ಷೆ ನಡೆಸಿದಾಗ ಹಫೀಜ್​ ಬೌಲಿಂಗ್​ ಶೈಲಿ ಐಸಿಸಿ ನಿಯಮದ ಪ್ರಕಾರ ಇಲ್ಲವೆಂದು ಸಾಬೀತಾಗಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಯೋಜಿಸುವ ಯಾವುದೇ ಕ್ರಿಕೆಟ್ ಟೂರ್ನಿಗಳಲ್ಲಿ ಬೌಲಿಂಗ್​ ಮಾಡದಂತೆ ಹಫೀಜ್​​ಗೆ 2 ವರ್ಷಗಳ ಕಾಲ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ಹಫೀಜ್ ಐಸಿಸಿ ಮಾನ್ಯತೆ ಪಡೆದ ಕೇಂದ್ರದಲ್ಲಿ ಸ್ವತಂತ್ರ ಪರೀಕ್ಷೆಗೆ ಹಾಜರಾಗಿ, ಬೌಲಿಂಗ್ ಶೈಲಿ ಉತ್ತಮವಾಗಿದೆ ಎಂದು ಸಾಬೀತಾದಲ್ಲಿ ಮತ್ತೆ ಬೌಲಿಂಗ್​ ಮಾಡು ಅವಕಾಶ ನೀಡುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಫೀಜ್​ 'ನನ್ನ ಬೌಲಿಂಗ್ ಶೈಲಿ ಬಗ್ಗೆ ಇಸಿಬಿ ಬೌಲಿಂಗ್ ರಿವ್ಯೂ ತಂಡದ ವರದಿಯನ್ನು ನಾನು ಸ್ವೀಕರಿಸಿದ್ದೇನೆ. ಇಸಿಬಿ ನಿಯಮಾವಳಿಗಳ ಪ್ರಕಾರ, ಐಸಿಸಿ ಮಾನ್ಯತೆ ಪಡೆದ ಕೇಂದ್ರದಲ್ಲಿ ಸ್ವತಂತ್ರ ಪರೀಕ್ಷೆಗೆ ಹಾಜರಾಗಲು ನಾನು ಸಿದ್ಧನಿದ್ದೇನೆ, ಇದರಿಂದಾಗಿ ನಾನು ಇಸಿಬಿ ಟೂರ್ನಮೆಂಟ್​ಗಳಲ್ಲಿ ಬೌಲಿಂಗ್​ ಮಾಡುವುದಕ್ಕೆ ಅರ್ಹತೆ ಪಡೆಯುತ್ತೇನೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಈ ಹಿಂದೆ ಕೂಡ ಹಲವು ಬಾರಿ ಮೊಹಮ್ಮದ್ ಹಫೀಜ್​ ಮೇಲೆ ಅನುಮಾನಾಸ್ಪದ ಬೌಲಿಂಗ್ ಆರೋಪ ಕೇಳಿಬಂದಿತ್ತು.

Last Updated : Dec 25, 2019, 11:50 AM IST

ABOUT THE AUTHOR

...view details