ಕರ್ನಾಟಕ

karnataka

ETV Bharat / sports

90ರ ವೃದ್ಧೆ ಜೊತೆ ಫೋಟೋ: ಮೊಹಮ್ಮದ್​ ಹಫೀಜ್​ಗೆ ಕ್ವಾರಂಟೈನ್​ನಲ್ಲಿರಲು ಸೂಚನೆ - ಇಂಗ್ಲೆಂಡ್​ - ಪಾಕಿಸ್ತಾನ ಟೆಸ್ಟ್​ ಕ್ರಿಕೆಟ್​

ಹಫೀಜ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬುಧವಾರ ಏಜಸ್​ ಬೌಲ್​ನ ಗಾಲ್ಫ್​ ಕೋರ್ಟ್​ನಲ್ಲಿ 90ರ ವೃದ್ಧೆ ಜೊತೆ ಫೋಟೋ ತೆಗೆಸಿಕೊಂಡು ಬಯೋಸೆಕ್ಯೂರ್​ ನಿಯಮ ಉಲ್ಲಂಘಿಸಿದ್ದಲ್ಲದೆ, ಅದನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದರು.

ಮೊಹಮ್ಮದ್​ ಹಫೀಜ್
ಮೊಹಮ್ಮದ್​ ಹಫೀಜ್

By

Published : Aug 13, 2020, 12:16 PM IST

ಸೌತಾಂಪ್ಟನ್:ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿಯ ಬಯೋಸೆಕ್ಯೂರ್​ ನಿಯಮಗಳನ್ನು ಬ್ರೇಕ್​​ ಮಾಡಿದ ಪಾಕಿಸ್ತಾನದ ಹಿರಿಯ ಆಟಗಾರ ಮೊಹಮ್ಮದ್​ ಹಫೀಜ್​ ಸ್ವಯಂ ಕ್ವಾರಂಟೈನ್​ನಲ್ಲಿರಲು ಪಿಸಿಬಿ ಸೂಚಿಸಿದೆ.

ಹಫೀಜ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬುಧವಾರ ಏಜಸ್​ ಬೌಲ್​ನ ಗಾಲ್ಫ್​ ಕೋರ್ಟ್​ನಲ್ಲಿ 90ರ ವೃದ್ಧೆ ಜೊತೆ ಫೋಟೋ ತೆಗೆಸಿಕೊಂಡು ಬಯೋಸೆಕ್ಯೂರ್​ ನಿಯಮ ಉಲ್ಲಂಘಿಸಿದ್ದಲ್ಲದೆ, ಅದನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದರು.

ಈ ಫೋಟೋ ವೈರಲ್​ ಆಗುತ್ತಿದ್ದಂತೆ ಹಫೀಜ್​ ಅವರಿಗೆ ತಂಡದ ಆಟಗಾರರನ್ನು ಭೇಟಿ ಮಾಡದಂತೆ ಹಾಗೂ ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್​ ವರದಿ ಬರುವರೆಗೂ ಕ್ವಾರಂಟೈನ್​ನಲ್ಲಿರುವಂತೆ ಪಿಸಿಬಿ ಶಿಸ್ತುಕ್ರಮ ಕೈಗೊಂಡಿದೆ.

ದೀರ್ಘಕಾಲದ ನಂತರ ಕ್ರಿಕೆಟ್​ ಪುನಾರಂಭ ಕಂಡಿದ್ದು, ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಇದಕ್ಕಾಗಿ ಬಯೋಸೆಕ್ಯೂರ್​ ವಲಯ ನಿರ್ಮಿಸಿದೆ. ಈ ವೇಳೆ ಯಾವ ಆಟಗಾರರು ಈ ವಲಯದಿಂದ ಹೊರಬರಬಾರದು. ಮತ್ತು ಹೊರಗಿನ ವ್ಯಕ್ತಿಗಳು ಇಲ್ಲಿಗೆ ಬರಲು ಅವಕಾಶವಿರುವುದಿಲ್ಲ. ಒಂದು ವೇಳೆ ಯಾವುದೇ ಕ್ರಿಕೆಟಿಗರು ಈ ನಿಯಮ ಉಲ್ಲಂಘಿಸಿದರೆ ಅವರಿಗೆ 5 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಲು ಹಾಗೂ 2 ಬಾರಿ ಕೋವಿಡ್​ 19 ಟೆಸ್ಟ್​ನಲ್ಲಿ ನೆಗೆಟಿವ್​ ಫಲಿತಾಂಶ ಬಂದ ನಂತರವಷ್ಟೇ ಮತ್ತೆ ತಂಡ ಸೇರಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.

ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿ ವೇಳೆ ಇಂಗ್ಲೆಂಡ್​ ವೇಗಿ ಜೋಫ್ರಾ ಆರ್ಚರ್​ ಕೂಡ ನಿಯಮ ಉಲ್ಲಂಘಿಸಿ ಪಂದ್ಯದಿಂದ ಹೊರಗುಳಿದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ABOUT THE AUTHOR

...view details