ಮುಂಬೈ: ಮೊಹಮ್ಮದ್ ಅಜರುದ್ದೀನ್ ಸಿಡಿಸಿದ ಅಬ್ಬರದ ಶತಕದ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ನಲ್ಲಿ ಕೇರಳ ತಂಡ ಬಲಿಷ್ಠ ಮುಂಬೈ ತಂಡಕ್ಕೆ ಆಘಾತಕಾರಿ ಸೋಲುಣಿಸಿದೆ.
ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 196 ರನ್ಗಳಿಸಿತ್ತು. ಯುವ ಬ್ಯಾಟ್ಸ್ಮನ್ ಜೈಸ್ವಾಲ್ 40 , ಆದಿತ್ಯ ತಾರೆ 42 , ಸೂರ್ಯಕುಮಾರ್ ಯಾದವ್ 38 ಹಾಗೂ ಶಿವಂ ದುಬೆ 26 ರನ್ ಗಳಿಸಿದ್ದರು.
ಕೇರಳ ಪರ ಜಲಜ್ ಸಕ್ಷೇನಾ 34ಕ್ಕೆ 3, ಕೆಎಂ ಆಸಿಫ್ 25ಕ್ಕೆ 3 ವಿಕೆಟ್ ಪಡೆದಿದ್ದರು.
197 ರನ್ಗಳ ಗುರಿ ಬೆನ್ನತ್ತಿದ ಕೇರಳ ತಂಡ ಕೇವಲ15.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕನಾಗಿ ಕಣಕ್ಕಿಳಿದಿದ್ದ ಮೊಹಮ್ಮದ್ ಅಜರುದ್ದೀನ್ ಕೇವಲ 54 ಎಸೆತಗಳಲ್ಲಿ 9 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 137 ರನ್ ಸಿಡಿಸಿ ಗೆಲುವಿನ ರೂವಾರಿಯಾದರು.
ಇವರಿಗೆ ಸೂಕ್ತ ಬೆಂಬಲ ನೀಡಿದ ಕನ್ನಡಿಗ ರಾಬಿನ್ ಉತ್ತಪ್ಪ 33, ಸಂಜು ಸಾಮ್ಸನ್ 22 ರನ್ಗಳಿಸಿದರು.