ಲಾಹೋರ್: ಪಾಕಿಸ್ತಾನ ಸ್ಟಾರ್ ಬೌಲರ್ಗಳಾದ ಹಸನ್ ಅಲಿ ಹಾಗೂ ಮೊಹಮದ್ ಅಮೀರ್ ಪಾಕಿಸ್ತಾನ ತಂಡದ ಕೋಚ್ ಮಿಸ್ಬಾ ಉಲ್ ಹಕ್ ಕ್ರಿಯೇಟ್ ಮಾಡಿದ್ದ ವಾಟ್ಸ್ಆ್ಯಪ್ ಗ್ರೂಪ್ನಿಂದ ಹೊರ ಬಂದಿದ್ದಾರೆ.
ಕಳೆದ ವಾರ ಪಿಸಿಬಿ 2020-21ರ ಆವೃತ್ತಿಯ 18 ಆಟಗಾರರ ಕೇಂದ್ರೀಯ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ಅನುಭವಿ ಬೌಲರ್ಗಳಾದ ಮೊಹಮ್ಮದ್ ಅಮೀರ್, ವಹಾಬ್ ರಿಯಾಜ್ ಹಾಗೂ ಹಸನ್ ಅಲಿ ಗುತ್ತಿಗೆಯಿಂದ ಹೊರ ಬಿದ್ದಿದ್ದರು. ಇದೀಗ ಅವರು ಪಿಸಿಬಿ ಫಿಟ್ನೆಸ್ ಹಾಗೂ ಇತರೆ ಮಾಹಿತಿ ಹಂಚಿಕೊಳ್ಳಲು ಕ್ರಿಯೇಟ್ ಮಾಡಿದ್ದ ವಾಟ್ಸ್ಆ್ಯಪ್ ಗ್ರೂಪ್ನಿಂದ ಅಮೀರ್ ಹಾಗೂ ಹಸನ್ ಅಲಿ ಹೊರ ಬಂದಿದ್ದಾರೆ.