ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ತಂಡವನ್ನು ಮುನ್ನಡೆಸಿದ ಏಷ್ಯನ್ ಆಟಗಾರ ಎನಿಸಿಕೊಂಡ ಮೊಯಿನ್​ ಅಲಿ - ನಾಸಿರ್​ ಹಸೇನ್​

ಇಯಾನ್​ ಮಾರ್ಗನ್​ ಫೀಲ್ಡಿಂಗ್​ ವೇಳೆ ಬೆರಳಿನ ಗಂಭೀರ ಗಾಯಕ್ಕೆ ಒಳಗಾಗಿದ್ದರು. ಆದರೂ ಬ್ಯಾಟಿಂಗ್​ ನಡೆಸಿದ್ದ ಅವರು 7 ರನ್​ಗಳಿಸಿ ಔಟಾಗಿದ್ದರು. ಏಕದಿನ ಸರಣಿಗೂ ಮುನ್ನ ಅವರಿಗೆ ಇಸಿಬಿ ವಿಶ್ರಾಂತಿ ನೀಡಿದ್ದು ಔಪಚಾರಿಕ ಪಂದ್ಯವಾದ ಕೊನೆಯ ಟಿ20ಯಲ್ಲಿ ಮೊಯಿನ್​ ಅಲಿಗೆ ನಾಯಕತ್ವ ನೀಡಿದೆ. ಮೊಯಿನ್​ ಅಲಿ ಟಿ20 ಬ್ಯಾಸ್ಟ್​ ಪ್ರಶಸ್ತಿ ಗೆದ್ದ ತಂಡದ ನಾಯಕರಾಗಿದ್ದಾರೆ.

ಮೊಯಿನ್​ ಅಲಿ
ಮೊಯಿನ್​ ಅಲಿ

By

Published : Sep 8, 2020, 11:58 PM IST

ಸೌತಾಂಪ್ಟನ್​:ಇಂಗ್ಲೆಂಡ್​ ತಂಡದ ನಾಯಕ ಇಯಾನ್​ ಮಾರ್ಗನ್​ ಎರಡನೇ ಪಂದ್ಯದ ವೇಳೆ ಬೆರಳಿನ ಗಾಯಕ್ಕೊಳಗಾಗಿದ್ದರಿಂದ 3ನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದು, ಉಪನಾಯಕ ಮೊಯಿನ್​ ಅಲಿ ತಂಡದ ನಾಯಕರಾಗಿ ಬಡ್ತಿ ಪಡೆದಿದ್ದಾರೆ.

ಇಯಾನ್​ ಮಾರ್ಗನ್​ ಫೀಲ್ಡಿಂಗ್​ ವೇಳೆ ಬೆರಳಿನ ಗಂಭೀರ ಗಾಯಕ್ಕೆ ಒಳಗಾಗಿದ್ದರು. ಆದರೂ ಬ್ಯಾಟಿಂಗ್​ ನಡೆಸಿದ್ದ ಅವರು 7 ರನ್​ಗಳಿಸಿ ಔಟಾಗಿದ್ದರು. ಏಕದಿನ ಸರಣಿಗೂ ಮುನ್ನ ಅವರಿಗೆ ಇಸಿಬಿ ವಿಶ್ರಾಂತಿ ನೀಡಿದ್ದು ಔಪಚಾರಿಕ ಪಂದ್ಯವಾದ ಕೊನೆಯ ಟಿ20ಯಲ್ಲಿ ಮೊಯಿನ್​ ಅಲಿಗೆ ನಾಯಕತ್ವ ನೀಡಿದೆ. ಮೊಯಿನ್​ ಅಲಿ ಟಿ20 ಬ್ಯಾಸ್ಟ್​ ಪ್ರಶಸ್ತಿ ಗೆದ್ದ ತಂಡದ ನಾಯಕರಾಗಿದ್ದಾರೆ.

ಈ ಮೂಲಕ ಆಂಗ್ಲರ ಟಿ20 ತಂಡವನ್ನು ಮುನ್ನಡೆಸಿದ ಏಷ್ಯಾ ಮೂಲದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಮೊಯಿನ್​ ಅಲಿ ಪಾತ್ರರಾದರು. ಹಾಗೂ ಯಾವುದೇ ಮಾದರಿ ಕ್ರಿಕೆಟ್​ನಲ್ಲಿ ನಾಸಿರ್​ ಹುಸೇನ್​ ನಂತರ ಇಂಗ್ಲೆಂಡ್​ ತಂಡದ ನಾಯಕನಾದ ಹೆಗ್ಗಳಿಕೆಗೂ ಪಾತ್ರರಾದರು. ನಾಸಿರ್​ 2003ರಲ್ಲಿ ಇಂಗ್ಲೆಂಡ್ ತಂಡದ ನಾಯಕರಾಗಿದ್ದರು.

ಇಂಗ್ಲೆಂಡ್​ ತಂಡವನ್ನು ಮುನ್ನಡೆಸುವುದು ಒಂದು ದೊಡ್ಡ ಗೌರವ, ಆ ಜವಾಬ್ದಾರಿವಹಿಸಿಕೊಳ್ಳುವುದಕ್ಕೆ ಖುಷಿಯಾಗಿದೆ. ಆದರೆ ಮಾರ್ಗನ್​ ರಷ್ಟು ಉತ್ತಮ ಎಂದು ಆಲೋಚಿಸುವುದಿಲ್ಲ. ಮಾರ್ಗನ್ ಅಂತಹ ನಾಯಕರು ತಂಡದಲ್ಲಿ ಇತರ ನಾಯಕರನ್ನು ಸೃಷ್ಠಿಸುತ್ತಾರೆ ಎಂದಿದ್ದಾರೆ.

ಈಗಾಗಲೆ ಸರಣಿ ಗೆದ್ದಿರುವ ಇಂಗ್ಲೆಂಡ್​ ತಂಡಕ್ಕೆ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಆಸ್ಟ್ರೇಲಿಯಾ ಕೂಡ ಡೇವಿಡ್​ ವಾರ್ನರ್​,ಪ್ಯಾಟ್​ ಕಮ್ಮಿನ್ಸ್​ ಹಾಗೂ ಅಲೆಕ್ಸ್​ ಕ್ಯಾರಿಗೆ ವಿಶ್ರಾಂತಿ ನೀಡಿದೆ.

ABOUT THE AUTHOR

...view details