ಹೈದರಾಬಾದ್ :ಆಸೀಸ್ ಭದ್ರಕೋಟೆಯಾಗಿದ್ದ ಬ್ರಿಸ್ಬೇನ್ನ ಗಬ್ಬಾದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿ ಸರಣಿ ಜಯಸಿರುವುದಕ್ಕೆ ಪ್ರಧಾನಿ ಮೋದಿ ಭಾರತೀಯಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
"ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಯಶಸ್ಸನ್ನು ನಾವೆಲ್ಲರೂ ಆನಂದಿಸಿದ್ದೇವೆ. ಅವರ ಗಮನಾರ್ಹ ಸಾಮರ್ಥ್ಯ ಮತ್ತು ಉತ್ಸಾಹ ಸರಣಿಯುದ್ದಕ್ಕೂ ಗೋಚರಿಸಿದೆ. ಅವರ ಉದ್ದೇಶ, ಮನೋಭಾವ ಮತ್ತು ದೃಢ ನಿಶ್ಚಯವೇ ಈ ಯಶಸ್ಸಿಗೆ ಕಾರಣ. ಭಾರತ ತಂಡಕ್ಕೆ ಅಭಿನಂದನೆಗಳು! ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ' ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.