ಮುಂಬೈ: ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ಮಿಥಾಲಿ ರಾಜ್ ವಿಶ್ವಕಪ್ ಫೈನಲ್ಗೆ ಲಗ್ಗೆ ಹಾಕಿರುವ ಹರ್ಮನ್ ಪ್ರೀತ್ ಕೌರ್ ತಂಡಕ್ಕೆ ವಿಶ್ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಸೀರೆ ಹಾಕಿಕೊಂಡು ಮೈದಾನದಲ್ಲಿ ಕ್ರಿಕೆಟ್ ಆಡುವ ಮೂಲಕ ಮಹಿಳಾ ತಂಡ ಹಾಗೂ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ವಿಶ್ ಮಾಡಿರುವ ಮಿಥಾಲಿ ರಾಜ್, ವಿಡಿಯೋ ತುಣಕನ್ನ ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿದ್ದಾರೆ.
ಸೀರೆ ಹಾಕಿಕೊಂಡು ಕ್ರಿಕೆಟ್ ಆಡಲು ಮೈದಾನಕ್ಕಿಳಿದ ಮಿಥಾಲಿ... ಅವರ ವಿಶ್ ಹೀಗಿದೆ ನೋಡಿ - ವಿಶ್ವ ಮಹಿಳಾ ದಿನಾಚರಣೆ
ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ಮಿಥಾಲಿ ರಾಜ್ ಸೀರೆ ಹಾಕಿಕೊಂಡು ಮೈದಾನಕ್ಕಿಳಿದು ಎಲ್ಲರ ಗಮನ ಸೆಳೆದಿದ್ದಾರೆ.
Mithali raj
ಸೀರೆ ಭಾರತೀಯ ಸಂಪ್ರದಾಯ. "ಪ್ರತಿ ಸೀರೆ ನಿಮಗಿಂತ ಹೆಚ್ಚಿನದನ್ನು ಹೇಳುತ್ತದೆ. ಇದು ನಿಮ್ಮನ್ನು ಸದೃಢವಾಗಿರಲು ಎಂದಿಗೂ ಕೇಳುವುದಿಲ್ಲ. ಈ ಮಹಿಳಾ ದಿನ (International Women's Day) ಒಂದು ಅಮೂಲ್ಯವಾದ ವಿಷಯವನ್ನು ಪ್ರಾರಂಭಿಸುತ್ತದೆ. ಈ ಮಹಿಳಾ ದಿನವು ತನ್ನದೇ ಆದ ಪ್ರಕಾರ ಬದುಕಲು ಪ್ರಾರಂಭಿಸುತ್ತದೆ" ಎಂದು ಅವರು ಬರೆದಿದ್ದಾರೆ. ಅವರ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದ್ದು, ಮಿಥಾಲಿ ಹಾಕಿಕೊಂಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ಶೇರ್ ಆಗಿದೆ.