ಕರ್ನಾಟಕ

karnataka

ETV Bharat / sports

ಮಹಿಳಾ ಬಿಗ್​ ಬ್ಯಾಷ್​ ಲೀಗ್​ - ಟಿ-20 ಚಾಲೆಂಜ್​​ ನಡುವಣ ಘರ್ಷಣೆ : ಮಿಥಾಲಿ ರಾಜ್ ಏನ್​ ಅಂತಾರೆ? - ಮಹಿಳಾ ಟಿ-20 ಚಾಲೆಂಜ್

ನಾಲ್ಕು ಪಂದ್ಯಗಳ ಮಹಿಳಾ ಟಿ-20 ಚಾಲೆಂಜ್‌ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಈ ಮೂಲಕ ಅದು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಇದೇ ವೇಳೆ ಮಹಿಳಾ ಬಿಗ್ ಬ್ಯಾಷ್​ನೊಂದಿಗೆ ಟಿ - 20 ಚಾಲೆಂಜರ್​‌ ಘರ್ಷಣೆ ಬಗ್ಗೆ ವಿದೇಶಿ ತಾರೆಗಳ ಹತಾಶೆಯನ್ನೂ ಅರ್ಥಮಾಡಿಕೊಳ್ಳುತ್ತೇನೆ ಎಂದು ಟೀಂ ಇಂಡಿಯಾ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಹೇಳಿದ್ದಾರೆ.

Mithali Raj
ಮಿಥಾಲಿ ರಾಜ್

By

Published : Aug 7, 2020, 10:03 AM IST

ನವದೆಹಲಿ: ಕೋವಿಡ್ -19 ನಂತಹ ಪರಿಸ್ಥಿತಿಯಲ್ಲಿ ನಾಲ್ಕು ಪಂದ್ಯಗಳ ಮಹಿಳಾ ಟಿ-20 ಚಾಲೆಂಜ್​​​​‌ ಆಯೋಜಿಸಲು ಬಿಸಿಸಿಐ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಎಂದು ಟೀಂ ಇಂಡಿಯಾ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಹೇಳಿದ್ದಾರೆ.

ಬಿಗ್ ಬ್ಯಾಷ್​ನೊಂದಿಗೆ ಟಿ-20 ಚಾಲೆಂಜ್‌ ಘರ್ಷಣೆ ಬಗ್ಗೆ ವಿದೇಶಿ ತಾರೆಗಳ ಹತಾಶೆಯನ್ನು ಅರ್ಥಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಅಲಿಸಾ ಹೀಲಿ ನೇತೃತ್ವದ ವಿದೇಶಿ ಆಟಗಾರರು ಮಹಿಳಾ ಬಿಗ್​ ಬ್ಯಾಷ್​ ಲೀಗ್​ ಜೊತೆಯಲ್ಲೆ ಮಹಿಳಾ ಟಿ-20 ಚಾಲೆಂಜ್‌ ಆಯೋಜನೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಸೆಪ್ಟೆಂಬರ್‌ನಲ್ಲಿ ಮಹಿಳಾ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ಮುಂದಾಗುತ್ತಿಲ್ಲ ಎಂದು ಬಿಸಿಸಿಐ ಅನ್ನು ಟೀಕಿಸಿದ್ದಾರೆ.

ಈ ಎರಡು ವಿಷಯಗಳ ಬಗ್ಗೆ ಮಾತನಾಡಿದ ಮಿಥಾಲಿ ರಾಜ್, ಜನರು ಶೀಘ್ರವಾಗಿ ತೀರ್ಪು ನೀಡುತ್ತಾರೆ. ಬಿಸಿಸಿಐ ಅಧ್ಯಕ್ಷ (ಸೌರವ್ ಗಂಗೂಲಿ), ಕಾರ್ಯದರ್ಶಿ (ಜೈ ಶಾ) ಮತ್ತು ಐಪಿಎಲ್ ಜಿಸಿ ಮುಖ್ಯಸ್ಥ (ಬ್ರಿಜೇಶ್ ಪಟೇಲ್) ಮಹಿಳಾ ಕ್ರಿಕೆಟ್ ಬಗ್ಗೆ ಬಹಳ ಪ್ರೋತ್ಸಾಹಿಸುತ್ತಿದ್ದಾರೆ ಎಂದಿದ್ದಾರೆ.

"ನಾವು ವೈಯಕ್ತಿಕವಾಗಿ ಚಾಲೆಂಜರ್ ಟ್ರೋಫಿಯನ್ನು ಆಡಲು ಬರುವುದಿಲ್ಲ ಎಂದು ನಾನು ಭಾವಿಸಿದ್ದೇನೆ ಏಕೆಂದರೆ ಪುರುಷರ ಐಪಿಎಲ್ ಸಹ ಸಂದೇಹದಲ್ಲಿದೆ. ಆದರೆ, ಈ ಆಟಗಳು ಹೆಚ್ಚು ಸ್ವಾಗತಾರ್ಹ" ಎಂದು ಮಿಥಾಲಿ ವಿಶೇಷ ಸಂದರ್ಶನವೊಂದರಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

"ಬಹಳಷ್ಟು ವಿದೇಶಿ ಆಟಗಾರರು ಮಹಿಳಾ ಟಿ - 20 ಚಾಲೆಂಜ್‌ ಸಮಯವನ್ನು ಪ್ರಶ್ನಿಸಿದ್ದಾರೆ ಎಂದು ನನಗೆ ತಿಳಿದಿದೆ. ಆದರೆ, ಇದು ಸಾಮಾನ್ಯ ಸಂದರ್ಭವಲ್ಲ. ಸಾಮಾನ್ಯವಾಗಿ, ಐಪಿಎಲ್ ಏಪ್ರಿಲ್ - ಮೇ ತಿಂಗಳಲ್ಲಿ ನಡೆಯುತ್ತದೆ ಮತ್ತು ಡಬ್ಲ್ಯೂಬಿಬಿಎಲ್ ಜೊತೆ ಘರ್ಷಣೆ ಆಗುವುದಿಲ್ಲ ಎಂದಿದ್ದಾರೆ.

ABOUT THE AUTHOR

...view details