ಕರ್ನಾಟಕ

karnataka

ETV Bharat / sports

ಐಸಿಸಿ ದಶಕದ ಮಹಿಳಾ ತಂಡ: ಮಿಥಾಲಿ, ಕೌರ್​ ಸೇರಿ ನಾಲ್ವರು ಭಾರತೀಯರಿಗೆ ಸ್ಥಾನ

ದಶಕದ ಟಿ20 ಮತ್ತು ಏಕದಿನ ತಂಡವನ್ನು ಐಸಿಸಿ ಪ್ರಕಟಿಸಿದ್ದು ಎರಡೂ ತಂಡಕ್ಕೂ ಆಸ್ಟ್ರೇಲಿಯಾ ತಂಡದ ಮೆಗ್ ಲ್ಯಾನಿಂಗ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಐಸಿಸಿ ದಶಕದ ತಂಡ
ಐಸಿಸಿ ದಶಕದ ತಂಡ

By

Published : Dec 27, 2020, 7:49 PM IST

ಲಂಡನ್​:ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಭಾನುವಾರ ದಶಕದ ಮಹಿಳೆಯರ ಟಿ20 ಮತ್ತು ಏಕದಿನ ಕ್ರಿಕೆಟ್​ ತಂಡವನ್ನು ಘೋಷಣೆ ಮಾಡಿದೆ. ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್​, ಟಿ20 ತಂಡದ ನಾಯಕಿ ಹರ್ಮನ್​ ಪ್ರೀತ್ ಕೌರ್ ಸೇರಿದಂತೆ 4 ಆಟಗಾರ್ತಿಯರು ಈ ತಂಡಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಐಸಿಸಿ ಮಹಿಳಾ ಏಕದಿನ ತಂಡದಲ್ಲಿ ಮಿಥಾಲಿ ರಾಜ್​ ಹಾಗೂ ಜೂಲಾನ್​ ಗೋಸ್ವಾಮಿ ಭಾರತ ತಂಡದಿಂದ ಆಯ್ಕೆಯಾಗಿದ್ದಾರೆ. ಈ ತಂಡಕ್ಕೆ ಆಸ್ಟ್ರೇಲಿಯಾ ಮೆಗ್ ಲ್ಯಾನಿಂಗ್ ನಾಯಕಿಯಾಗಿದ್ದಾರೆ.

ಇನ್ನುಳಿದಂತೆ ಆಸ್ಟ್ರೇಲಿಯಾದ ಅಲಿಸಾ ಹೀಲಿ, ಎಲಿಸಾ ಪೆರ್ರಿ, ನ್ಯೂಜಿಲ್ಯಾಂಡ್​ನ ಸೂಜಿ ಬೇಟ್ಸ್​, ವೆಸ್ಟ್​ ಇಂಡೀಸ್​ನ ಸ್ಟೆಫಾನೀ ಟೇಲರ್ ಮತ್ತು ಅನಿಸಾ ಮೊಹಮ್ಮದ್​​, ಇಂಗ್ಲೆಂಡ್​ನ ಸಾರಾ ಟೇಲರ್​, ದಕ್ಷಿಣ ಆಫ್ರಿಕಾದ ಡೇನ್​ ವೇನ್​ ನೀಕರ್ಕ್​, ಮರಿಝಾನ್ನೆ ಕಾಪ್ ಅವಕಾಶ ಪಡೆದಿದ್ದಾರೆ.

ಟಿ20 ತಂಡದಲ್ಲಿ ಭಾರತದಿಂದ ಹರ್ಮನ್ ಪ್ರೀತ್ ಕೌರ್​ ಮತ್ತು ಪೂನಮ್ ಯಾದವ್​ ಅವಕಾಶ ಪಡೆದಿದ್ದಾರೆ. ಈ ತಂಡವನ್ನೂ ಸಹ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್​ ಮುನ್ನಡೆಸಿದ್ದಾರೆ.

ಉಳಿದಂತೆ ಆಸೀಸ್​ನ ಅಲಿಸಾ ಹೀಲಿ, ಎಲಿಸಾ ಪೆರ್ರಿ ಮತ್ತು ಮೇಗನ್ ಶೂಟ್​, ಕಿವೀಸ್​ನ ಸೂಫಿ ಡಿವೈನ್​ ಮತ್ತು ಸೂಜಿ ಬೇಟ್ಸ್​, ವಿಂಡೀಸ್​ನ ಸ್ಟೆಫಾನೀ ಟೇಲರ್​ ಮತ್ತು ದಿಯಾಂಡ್ರ ಡಟ್ಟಿನ್​, ಇಂಗ್ಲೆಂಡ್​ನ ಅನ್ಯ ಶ್ರುಬ್ಸೋಲ್ ದಶಕದ ಬೆಸ್ಟ್​ ಇಲೆವೆನ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಚ್ಚರಿಯೆಂದರೆ, ಎರಡೂ ತಂಡದಲ್ಲೂ ಪಾಕಿಸ್ತಾನ ಮತ್ತು ಶ್ರೀಲಂಕಾದ ಯಾವುದೇ ಆಟಗಾರ್ತಿಯರು ಅವಕಾಶ ಪಡೆಯುವಲ್ಲಿ ಸಫಲರಾಗಿಲ್ಲ.

ABOUT THE AUTHOR

...view details