ನವದೆಹಲಿ: ಮಹಿಳಾ ಐಪಿಎಲ್ ಈ ವರ್ಷ ನಡೆಯಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳುತ್ತಿದ್ದಂತೆ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಸಂತಸ ವ್ಯಕ್ತಪಡಿಸಿದ್ದು, ಮಹಿಲಾ ಕ್ರಿಕೆಟ್ಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎಂದು ಧನ್ಯವಾದ ಅರ್ಪಿಸಿದ್ದಾರೆ.
ಪುರುಷರ ಐಪಿಲ್ ಸೆಪ್ಟೆಂಬರ್ 19ರಿಂದ ನವೆಂಬರ್ 8 ಅಥವಾ 10ರೊಳಗೆ ಯುಎಇನಲ್ಲಿ ನಡೆಯಲಿದೆ. ಇದರಂತೆಯ ಮಹಿಳಾ ಐಪಿಎಲ್ ಟೂರ್ನಿ ಕೂಡ ಪ್ರತಿ ವರ್ಷದಂತೆ ನಡೆಯಲಿದೆ. ವೇಳಾಪಟ್ಟಿಯನ್ನು ರಚಿಸಲಿದ್ದೇವೆ ಎಂದು ಗಂಗೂಲಿ ಹೇಳಿದ್ದಾರೆ. ಈ ಸುದ್ದಿಯನ್ನು ಪತ್ರಕರ್ತರೊಬ್ಬರು ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಸಯಿಸಿರುವ ಮಿಥಾಲಿ " ಇದೊಂದು ಅತ್ಯುತ್ತಮ ಸುದ್ದಿ. ನಮ್ಮ ಏಕದಿನ ವಿಶ್ವಕಪ್ ಅಭಿಯಾನಕ್ಕೆ ಉತ್ತರ ಆರಂಭವಾಗಲಿದೆ. ಮಹಿಳಾ ಕ್ರಿಕೆಟ್ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸೌರವ್ ಗಂಗೂಲಿಯವರಿಗೆ, ಬಿಸಿಸಿಐ ಹಾಗೂ ಜಯ್ ಶಾ ಅವರಿಗೆ ಧನ್ಯವಾದಗಳು" ಎಂದು ಭಾರತ ಏಕದಿನ ತಂಡದ ನಾಯಕಿ ಟ್ವೀಟ್ ಮಾಡಿದ್ದಾರೆ.