ಕರ್ನಾಟಕ

karnataka

ETV Bharat / sports

'ಅನ್​ಲಕ್ಕಿ ಆಟಗಾರ'ನಿಗೆ ಪಾಕ್ ಮುಖ್ಯ ಕೋಚ್ ಹುದ್ದೆ!

ಡೀನ್ ಜೋನ್ಸ್, ಮೊಹ್ಸಿನ್ ಖಾನ್ ಹಾಗೂ ಕರ್ಟ್ನಿ ವಾಲ್ಶ್​ರಂತಹ ದಿಗ್ಗಜರನ್ನು ಹಿಂದಿಕ್ಕಿ ಮಿಸ್ಬಾ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹುದ್ದೆ ಅಲಂಕರಿಸಿದ್ದಾರೆ.

ಮಿಸ್ಬಾ ಉಲ್ ಹಕ್

By

Published : Sep 4, 2019, 12:58 PM IST

ಲಾಹೋರ್:ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಪಾಕಿಸ್ತಾನದ ತಂಡದ ನೂತನ ಕೋಚ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ವಖಾರ್ ಯೂನಿಸ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಪ್ರಸ್ತುತ ಮುಖ್ಯ ಕೋಚ್ ಹಾಗೂ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿರುವ ಪಾಕಿಸ್ತಾನ ತಂಡದ ಮಾಜಿ ಆಟಗಾರರ ಸೇವಾ ಅವಧಿ ಮೂರು ವರ್ಷದ್ದಾಗಿರಲಿದೆ.

ಪಾಕಿಸ್ತಾನ ತಂಡ ಕಳೆದ ಕೆಲವು ವರ್ಷಗಳಿಂದ ನೀರಸ ಪ್ರದರ್ಶನ ನೀಡುತ್ತಿದೆ. ಇತ್ತೀಚೆಗೆ ಮುಕ್ತಾಯವಾದ ವಿಶ್ವಕಪ್ ಟೂರ್ನಿಯಲ್ಲಿ ಸಹ ಪಾಕ್​ ತಂಡ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಭಾರತ ವಿರುದ್ಧ ಹೀನಾಯ ಸೋಲನುಭವಿಸಿ ಭಾರಿ ಟೀಕೆಗೆ ಒಳಗಾಗಿತ್ತು.

ವಕಾರ್ ಯೂನಿಸ್ ಜೊತೆಗೆ ಮಿಸ್ಬಾ ಉಲ್ ಹಕ್

ಪಾಕಿಸ್ತಾನದ ಪಾಲಿಗೆ ಅನ್​ಲಕ್ಕಿ ಆಟಗಾರ ಎಂದು ಕರೆಸಿಕೊಳ್ಳುವ ಮಿಸ್ಪಾ ಉಲ್ ಹಕ್ ಪಾತಾಳಕ್ಕೆ ಬಿದ್ದಿರುವ ಪಾಕಿಸ್ತಾನ ತಂಡವನ್ನು ಮೇಲೆತ್ತುವ ಬಹುದೊಡ್ಡ ಸವಾಲಿದೆ.

ABOUT THE AUTHOR

...view details