ಆ್ಯಂಟಿಗುವಾ: ವೆಸ್ಟ್ ಇಂಡೀಸ್ ಹಾಗೂ ಭಾರತ ತಂಡಗಳ ನಡುವಿನ ಮೊದಲ ಟೆಸ್ಟ್‌ನಲ್ಲಿ ವಿಂಡೀಸ್ ಬ್ಯಾಟ್ಸ್ಮನ್ ಬರೋಬ್ಬರಿ 95 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರೂ ಒಂದೂ ರನ್ಗಳಿಸಲಾಗದೆ ಔಟ್ ಆಗಿದ್ದಾರೆ.
ಒಂದೂವರೆ ಗಂಟೆ ಕ್ರೀಸ್‌ನಲ್ಲಿದ್ದರೂ ವಿಂಡೀಸ್ ಬ್ಯಾಟ್ಸ್ಮನ್ ಗಳಿಸಿದ್ದು ಶೂನ್ಯ! - west indies-India
ಮಿಗಲ್ ಕಮ್ಮಿನ್ಸ್ ಬರೋಬ್ಬರಿ 95 ನಿಮಿಷಗಳ ಕ್ರೀಸ್‌ನಲ್ಲಿದ್ದರೂ ಶೂನ್ಯ ರನ್ಗೆ ವಿಕೆಟ್ ಒಪ್ಪಿಸಿ ದೀರ್ಘ ಸಮಯ ಕ್ರೀಸ್‌ನಲ್ಲಿದ್ದರೂ ಡಕ್ ಔಟಾದ 5ನೇ ಬ್ಯಾಟ್ಸ್ಮನ್ ಎಂಬ ಬೇಡದ ದಾಖಲೆಗೆ ಪಾತ್ರರಾಗಿದ್ದರು.
ಇಂತಹ ಅಪರೂಪದ ದಾಖಲೆಗೆ ಪಾತ್ರರಾಗಿರುವುದು ವೆಸ್ಟ್ ಇಂಡೀಸ್ ತಂಡದ ಪರ 10ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ್ದ ಮಿಗಲ್ ಕಮ್ಮಿನ್ಸ್ ಬರೋಬ್ಬರಿ 95 ನಿಮಿಷಗಳ ಕ್ರೀಸ್‌ನಲ್ಲಿದ್ದರೂ 10ನೇ ಬ್ಯಾಟ್ಸ್ಮನ್ ಆಗಿ ಔಟಾಗಿದ್ದರು. ಆಶ್ಚರ್ಯವೆಂದರೆ ಕಮ್ಮಿನ್ಸ್ ಡಕ್ ಔಟಾಗಿ ಪೆವಿಲಿಯನ್ಗೆ ಸೇರಿಕೊಂಡರು.
ಕಮ್ಮಿನ್ಸ್ 57ನೇ ಓವರ್ನಲ್ಲಿ ಬ್ಯಾಟಿಂಗ್ಗೆ ಬಂದು, ನಾಯಕ ಜಾಸನ್ ಹೋಲ್ಡರ್ ಜೊತೆಗೂಡಿ 41 ರನ್ಗಳ ಜೊತೆಯಾಟ ನೀಡಿದ್ದರು. ಆದರೆ, ಎಲ್ಲಾ 39ರನ್ ಹೋಲ್ಡರ್ ಬಾರಿಸಿದ್ದರು. 2 ರನ್ ಇತರೆ ರನ್ ಮೂಲಕ ಬಂದಿತ್ತು. 45 ಎಸೆತಗಳನ್ನೆದುರಿಸಿದ್ದ ಕಮ್ಮಿನ್ಸ್ ಜಡೇಜಾ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಈ ಮೂಲಕ ದೀರ್ಘ ಸಮಯದ ತನಕ ಕ್ರೀಸ್ನಲ್ಲಿದ್ದು ಡಕ್ ಔಟ್ ಆದ ಆಟಗಾರರ ಪಟ್ಟಿ ಸೇರಿಕೊಂಡರು.