ಅಹ್ಮದಾಬಾದ್: ಕಳೆದ ಕೆಲವು ದಿನಗಳಿಂದ ಭಾರತೀಯ ಪಿಚ್ಗಳ ಬಗ್ಗೆ ಟೀಕೆ ಮಾಡುತ್ತಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಇದೀಗ ಮೊದಲ ಬಾರಿಗೆ ಪಿಚ್ ಬದಲು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
"ಕಳೆದ ಕೆಲವು ಟೆಸ್ಟ್ ಪಂದ್ಯಗಳಿಗಿಂತ ಈ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ತುಂಬಾ ಕೆಟ್ಟದಾಗಿದೆ. ಈ ಪಿಚ್ ಮೊದಲ ಇನ್ನಿಂಗ್ಸ್ನಲ್ಲಿ ದೊಡ್ಡ ಮೊತ್ತ ಗಳಿಸಲು ಉತ್ತಮವಾಗಿದೆ. ಸ್ಪಿನ್ ಆಗುತ್ತಿಲ್ಲ, ಚೆಂಡು ಚೆನ್ನಾಗಿ ಬ್ಯಾಟ್ಗೆ ಬರುತ್ತಿದೆ. ಇದು ತುಂಬಾ ಕಳಪೆ ಬ್ಯಾಟಿಂಗ್" ಎಂದು ವಾನ್ ಟ್ವೀಟ್ ಮಾಡಿದ್ದಾರೆ.