ಕರ್ನಾಟಕ

karnataka

ETV Bharat / sports

'ಆರ್ಡರ್‌ ಆಫ್ ಆಸ್ಟ್ರೇಲಿಯಾ' ಗೌರವಕ್ಕೆ ಪಾತ್ರರಾದ ಮೈಕಲ್‌ ಕ್ಲಾರ್ಕ್‌

ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರರಾದ ಅಲೆನ್​ ಬಾರ್ಡರ್​, ಸ್ಟಿವ್​ ವಾ, ರಿಕಿ ಪಾಂಟಿಂಗ್​, ಬಾಬ್​ ಸಿಂಪ್ಸನ್​, ಆಸ್ಟ್ರೇಲಿಯಾ ರಾಷ್ಟ್ರೀಯ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ 2015ರ ವಿಶ್ವಕಪ್ ​ವಿಜೇತ ತಂಡದ ನಾಯಕನಾಗಿದ್ದ ಮೈಕಲ್​ ಕ್ಲಾರ್ಕ್​ಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Michael Clarke
ಮೈಕಲ್​ ಕ್ಲಾರ್ಕ್

By

Published : Jun 9, 2020, 11:03 AM IST

ಸಿಡ್ನಿ: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್​ ಕ್ಲಾರ್ಕ್​ಗೆ ಪ್ರತಿಷ್ಠಿತ ಆರ್ಡರ್​ ಆಫ್​ ಆಸ್ಟ್ರೇಲಿಯಾ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಹಿಂದೆ ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರರಾದ ಅಲೆನ್​ ಬಾರ್ಡರ್​, ಸ್ಟಿವ್​ ವಾ, ರಿಕಿ ಪಾಂಟಿಂಗ್​, ಬಾಬ್​ ಸಿಂಪ್ಸನ್​, ಆಸ್ಟ್ರೇಲಿಯಾ ರಾಷ್ಟ್ರೀಯ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ 2015ರ ವಿಶ್ವಕಪ್​ ವಿಜೇತ ತಂಡದ ನಾಯಕನಾಗಿದ್ದ ಮೈಕಲ್​ ಕ್ಲಾರ್ಕ್​ಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮೈಕಲ್‌ ಕ್ಲಾರ್ಕ್‌, ನಿಜವಾಗಿ ಹೇಳುತ್ತೇನೆ, ಈ ಸುದ್ದಿ ತಿಳಿದು ಜೂನ್‌ನಲ್ಲಿ ಏಪ್ರಿಲ್‌ ಫ‌ೂಲ್‌ ಆದಂತಾಗಿದೆ. ಬಹಳ ಅಚ್ಚರಿಯಾಗಿದೆ ಜೊತೆಗೆ ಅಷ್ಟೇ ಸಂತೋಷ ಕೂಡ ಆಗಿದೆ.

ಎಲ್ಲಾ ಕ್ರೀಡೆಗಳಂತೆ ಕ್ರಿಕೆಟ್ ಈ ದೇಶದ ಸಂಸ್ಕೃತಿಯ ದೊಡ್ಡ ಭಾಗವಾಗಿದೆ ಎಂದು ನಾನು ನಂಬಿದ್ದೇನೆ. ಆದರೆ ಕ್ರಿಕೆಟ್ ನಮ್ಮ ದೇಶದಲ್ಲಿ ಹೆಚ್ಚು ಪ್ರಬಲವಾಗಿದೆ. ಇದು ನಮ್ಮ ರಕ್ತದಲ್ಲಿದೆ ಮತ್ತು ನೀವು ಅದನ್ನು ಕುಳಿತು ನೋಡದಿದ್ದರೂ ಸಹ, ಕ್ರಿಕೆಟ್‌ನ ಶಬ್ದವೇ ಬೇಸಿಗೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ಮೈಕಲ್​ ಕ್ಲಾರ್ಕ್​ 115 ಟೆಸ್ಟ್​, 245 ಏಕದಿನ ಕ್ರಿಕೆಟ್​ ಪಂದ್ಯ ಹಾಗೂ 34 ಟಿ20 ಪಂದ್ಯಗಳನ್ನು ಆಡಿದ್ದು, ಟೆಸ್ಟ್​ನಲ್ಲಿ 8,643 ರನ್​, ಏಕದಿನ ಕ್ರಿಕೆಟ್​ನಲ್ಲಿ 7,981 ಹಾಗೂ ಟಿ20ಯಲ್ಲಿ 488 ರನ್‌ ​ಗಳಿಸಿದ್ದಾರೆ.

ABOUT THE AUTHOR

...view details