ಕರ್ನಾಟಕ

karnataka

ETV Bharat / sports

ಮುಂಬೈ ಇಂಡಿಯನ್ಸ್ ಸೇರಿದ ಹೊಸ ಪ್ಲೇಯರ್ಸ್​: ಸ್ವಾಗತ​ ಮಾಡಿಕೊಂಡ ರೋಹಿತ್​! - ಐಪಿಎಲ್​ 2021 ಹರಾಜು

ನಿನ್ನೆ ನಡೆದ ಬಿಡ್ಡಿಂಗ್​ನಲ್ಲಿ ಮುಂಬೈ ಇಂಡಿಯನ್ಸ್ ಕೆಲ ಪ್ರಮುಖ ಪ್ಲೇಯರ್ಸ್​ಗೆ ಖರೀದಿ ಮಾಡಿದ್ದು, ಇದೀಗ ಅವರನ್ನ ರೋಹಿತ್ ಶರ್ಮಾ ಸ್ವಾಗತ ಮಾಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.

MI Skipper Rohit Sharm
MI Skipper Rohit Sharm

By

Published : Feb 19, 2021, 7:08 PM IST

ಮುಂಬೈ:14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​​ ಲೀಗ್​ ಟೂರ್ನಿಗಾಗಿ ನಿನ್ನೆ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್​ ಏಳು ಪ್ಲೇಯರ್ಸ್​ ಖರೀದಿ ಮಾಡಿದ್ದು, ಅವರನ್ನ ರೋಹಿತ್​ ಶರ್ಮಾ ವೆಲ್​ಕಮ್ ಮಾಡಿಕೊಂಡಿದ್ದಾರೆ.

ರೋಹಿತ್​ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​​ ಬಳಗಕ್ಕೆ ನಾಥನ್​ ಕೌಲ್ಟರ್ ನೇಲ್​(5ಕೋಟಿ), ಆಡ್ಯಂ ಮಿಲ್ನೆ(3.2 ಕೋಟಿ), ಪಿಯೂಷ್​ ಚಾವ್ಹಾ(2.4 ಕೋಟಿ), ಜೇಮ್ಸ್​ ನೇಶಮ್​(50 ಲಕ್ಷ), ಯದುವೀರ್​ ಚರ್ಕೆ(20 ಲಕ್ಷ), ಮಾರ್ಕೋ ಜೆನ್ಸೆನ್​(20 ಲಕ್ಷ), ಹಾಗೂ ಅರ್ಜುನ್ ತೆಂಡೂಲ್ಕರ್​​(20 ಲಕ್ಷ ರೂ) ಸೇರಿಕೊಂಡಿದ್ದಾರೆ.

ಇದೀಗ ಟ್ವೀಟ್ ಮಾಡಿರುವ ರೋಹಿತ್​ ಶರ್ಮಾ 'ವೆಲ್​ಕಮ್​ ಟು ದಿ ಸಿಟಿ ಆಫ್​ ಹಿರೋಸ್​' ಎಂದು ಬರೆದುಕೊಂಡಿದ್ದಾರೆ. ಕಳೆದ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್​ ಆಗಿರುವ ತಂಡ ಮತ್ತೊಮ್ಮೆ ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಲು ಸಜ್ಜುಗೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಕೆಲ ಪ್ರಮುಖ ಪ್ಲೇಯರ್ಸ್ ಸೇರ್ಪಡೆ ಮಾಡಿಕೊಂಡು ಬಲಿಷ್ಠವಾಗಿದೆ.

ABOUT THE AUTHOR

...view details