ಮೆಲ್ಬೋರ್ನ್ :ಮೆಲ್ಬೋರ್ನ್ನ ಮೆಲ್ಟಾನ್ ಸಿಟಿಯ ಕೆಲ ಬೀದಿಗಳಿಗೆ ಕ್ರಿಕೆಟ್ ಲೆಜೆಂಡ್ಗಳ ಹೆಸರನ್ನಿಡುವ ಮೂಲಕ ಅಲ್ಲಿನ ಜನರನ್ನು ಆಕರ್ಷಿಸಲು ರಿಯಲ್ ಎಸ್ಟೇಟ್ ಉದ್ಯಮಿಗಳು ಪ್ರಯತ್ನಿಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳು ಅಲ್ಲಿನ ಅನಿವಾಸಿ ಭಾರತೀಯರನ್ನು ಆಕರ್ಷಿಸಲು ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಹಾಗೂ ಇತರೆ ಕ್ರಿಕೆಟರ್ಗಳ ಹೆಸರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ಯೋಜನೆ ಹೆಚ್ಚಿನ ಫಲ ಕಾಣುತ್ತಿದ್ದು, ಈ ಬೀದಿಗಳಲ್ಲಿ ಮನೆ ಅಥವಾ ನಿವೇಶನಗಳ ಬಗ್ಗೆ ವಿಚಾರಿಸುವ ಗ್ರಾಹಕರ ಸಂಖ್ಯೆಯೂ ಅಧಿಕವಾಗುತ್ತಿದೆಎಂದು ತಿಳಿದು ಬಂದಿದೆ.
ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಖ್ಯಾತಿ ಪಡೆದಿದ್ದಾರೆ. ಮೆಲ್ತಾನ್ ನಗರದಲ್ಲಿ ಸಚಿನ್ ಡ್ರೈವ್ ಮತ್ತು ಕೊಹ್ಲಿ ಕ್ರೆಸೆಂಟ್ ಎಂದು ಎರಡು ಬೀದಿಗಳಿಗೆ ನಾಮಕರಣ ಮಾಡಲಾಗಿದೆ. ಆಸ್ಟ್ರೇಲಿಯಾದ ಪ್ರಮುಖ ನಗರಗಳಾದ ವಿಕ್ಟೋರಿಯಾ, ಮೆಲ್ಬೋರ್ನ್ ನಗರಗಳಲ್ಲಿನ ಬೀದಿಗಳಿಗೆ ಈಗಾಗಲೇ ಕ್ರಿಕೆಟ್ ಖ್ಯಾತನಾಮರ ಹೆಸರಿಡಲಾಗಿದೆ. ಈ ಯೋಜನೆಗೆ ಹೆಚ್ಚು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದೆ ಎಂದು ಭಾರತೀಯ ಮೂಲದ ಡೆವೆಲಪರ್ ವರುಣ್ ಶರ್ಮಾ ಬಹಿರಂಗ ಪಡಿಸಿದ್ದಾರೆ.
ಭಾರತ-ಆಸೀಸ್ ಸರಣಿಗಾಗಿ ಇಂಡಿಯನ್ ಆಟಗಾರರು ಇಲ್ಲಿಗೆ ಬಂದಾಗ ಇದೇ ಬೀದಿಯಲ್ಲಿ ಓಡಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಪಾಕಿಸ್ತಾನದ ಲೆಜೆಂಡ್ ವಾಸೀಂ ಅಕ್ರಮ್(ಅಕ್ರಮ್ ವೇ), ಕಿವೀಸ್ ಲೆಜೆಂಡ್ ರಿಚರ್ಡ್ ಹ್ಯಾಡ್ (ಹ್ಯಾಡ್ಲೀ ಸ್ಟ್ರೀಟ್), ಕಪಿಲ್ ದೇವ್(ದೇವ್ ಟೆರೇಶ್), ಸರ್ ಗ್ಯಾರಿ ಫೀಲ್ಡ್ ಸೋಬರ್ಸ್, ಸ್ಟಿವ್ ವಾ(ವಾ ಸ್ಟ್ರೀಟ್) ಹೆಸರುಗಳನ್ನು ಕೆಲವು ಬೀದಿಗಳಿಗಿಡಲಾಗಿದೆ. ಇದೀಗ ಸಚಿನ್ ಹಾಗೂ ವಿರಾಟ್ ಕೊಹ್ಲಿ ಹೆಸರುಗಳೂ ಸೇರಿಕೊಂಡಿವೆ.