ಕರ್ನಾಟಕ

karnataka

ETV Bharat / sports

ಲ್ಯಾನಿಂಗ್ ಅಜೇಯ ಶತಕ: ಇನ್ನು ಒಂದು ಪಂದ್ಯ ಇರುವಂತೆ ಏಕದಿನ ಸರಣಿ ಗೆದ್ದ ಆಸೀಸ್ ವನಿತೆಯರು

ಕಿವೀಸ್ ನೀಡಿದ 253 ರನ್​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ನಾಯಕಿ ಮೆಗ್ ಲ್ಯಾನಿಂಗ್​ ಅವರ ಅಜೇಯ 101 ಹಾಗೂ ರಾಚೆಲ್ ಹೇನಸ್​ ಅವರ 82 ರನ್​ಗಳ ನೆರವಿನಿಂದ 45.1 ಓವರ್​ಗಳಲ್ಲಿ ಗುರಿ ತಲುಪಿತು.

By

Published : Oct 5, 2020, 6:49 PM IST

ಏಕದಿನ ಸರಣಿ ಗೆದ್ದ ಆಸೀಸ್ ವನಿತೆಯರು
ಲ್ಯಾನಿಂಗ್ ಅಜೇಯ ಶತ

ಬ್ರಿಸ್ಬೇನ್: ನಾಯಕಿ ಮೆಗ್​ ಲ್ಯಾನಿಂಗ್​ ಅವರ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್​ ವಿರುದ್ಧ 2ನೇ ಏಕದಿನ ಪಂದ್ಯವನ್ನು ಗೆದ್ದಿದ್ದು, ಇನ್ನು ಒಂದು ಪಂದ್ಯ ಇರುವಂತೆಯೇ ಸರಣಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್​ ತಂಡ ನಟಾಲಿಯಾ ಡಾಡ್ 34, ನಾಯಕಿ ಸೋಫಿ ಡಿವೈನ್ 79, ಆಮಿ ಸ್ಯಾಟರ್ತ್ವೈಟ್ 69, ಕೇಟಿ ಮರ್ಟಿನ್ 26, ಮ್ಯಾಡಿ ಗ್ರೀನ್ 21 ರನ್​ಗಳ ಉಪಯುಕ್ತ ಕೊಡುಗೆಯೊಂದಿಗೆ 50 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 252 ರನ್​ಗಳಿಸಿತ್ತು.

ಆಸ್ಟ್ರೇಲಿಯಾ ಪರ ಜೆಸ್​ ಜೊನಾಸ್ಸೆನ್​ 4 ವಿಕೆಟ್​, ಮೊಲಿನೆಕ್ಸ್​ 2 ಹಾಗೂ ಮೇಗನ್ ಶಟ್​ 2 ವಿಕೆಟ್​ ಪಡೆದು ಮಿಂಚಿದರು.

253 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ನಾಯಕಿ ಮೆಗ್ ಲ್ಯಾನಿಂಗ್​ ಅವರ ಅಜೇಯ 101 ಹಾಗೂ ರಾಚೆಲ್ ಹೇನಸ್​ ಅವರ 82 ರನ್​ಗಳ ನೆರವಿನಿಂದ 45.1 ಓವರ್​ಗಳಲ್ಲಿ ಗುರಿ ತಲುಪಿತು.

96 ಎಸೆತಗಳನ್ನೆದುರಿಸಿದ ಲ್ಯಾನಿಂಗ್​ 3 ಸಿಕ್ಸರ್ ಹಾಗೂ 9 ಬೌಂಡರಿ ಸಿಡಿಸಿದರು. ಹೇನಸ್​ 89 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 82 ರನ್​ಗಳಿಸಿದರು.

ನ್ಯೂಜಿಲ್ಯಾಂಡ್​​​​​​ ತಂಡದ ಅಮೆಲಿಯಾ ಕೆರ್ 3, ಹೇಲಿ ಜೆನ್ಸನ್ 1 ವಿಕೆಟ್‌ ಪಡೆದರು. ಅಜೇಯ ಶತಕ ಸಿಡಿಸಿದ ಮೆಗ್ ಲ್ಯಾನಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಅಕ್ಟೋಬರ್​ 7 ರಂದು ನಡೆಯಲಿದೆ.

ABOUT THE AUTHOR

...view details