ಕರ್ನಾಟಕ

karnataka

ETV Bharat / sports

ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ: ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ - ಟೀಂ ಇಂಡಿಯಾ ಪ್ರಸಿದ್ಧ್​ ಕೃಷ್ಣ

ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಯಾರೂ ಊಹಿಸದ ರೀತಿಯಲ್ಲಿ ಕನ್ನಡಿಗ ಪ್ರಸಿದ್ಧ್​ ಕೃಷ್ಣ ತಂಡ ಸೇರಿಕೊಂಡಿದ್ದಾರೆ.

Prasidh Krishna
Prasidh Krishna

By

Published : Mar 19, 2021, 3:08 PM IST

ಹೈದರಾಬಾದ್​:ಇಂಗ್ಲೆಂಡ್​ ವಿರುದ್ಧದ ಮೂರು ಏಕದಿನ ಪಂದ್ಯಗಳಿಗಾಗಿ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಆಯ್ಕೆ ಸಮಿತಿ ಕೆಲವು ಹೊಸ ಪ್ರತಿಭೆಗಳಿಗೆ ಮಣೆ ಹಾಕಿದೆ. ಪ್ರಮುಖವಾಗಿ ದೇಶಿ ಕ್ರಿಕೆಟ್​ನಲ್ಲಿ ಮಿಂಚಿರುವ ಕನ್ನಡಿಗ ಪ್ರಸಿದ್ಧ್​ ಕೃಷ್ಣ, ಆಲ್​ರೌಂಡರ್​ ಕೃನಾಲ್ ಪಾಂಡ್ಯ ಹಾಗೂ ಸ್ಫೋಟಕ ಬ್ಯಾಟ್ಸ್​ಮನ್​​ ಸೂರ್ಯಕುಮಾರ್​ ಯಾದವ್​ಗೆ ಮುಂದಿನ ಏಕದಿನ ಸರಣಿಗಾಗಿ ಆಯ್ಕೆ ಮಾಡಲಾಗಿದೆ.

ಕನ್ನಡಿಗ ಪ್ರಸಿದ್ಧ್​ ಕೃಷ್ಣ ಸಾಧನೆ

ಬಲಗೈ ವೇಗಿ ಪ್ರಸಿದ್ಧ್​ ಕೃಷ್ಣ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​​ ಪರ ಅಮೋಘ ಪ್ರದರ್ಶನ ನೀಡಿದ್ದು, ಆಡಿರುವ 24 ಪಂದ್ಯಗಳಿಂದ 18 ವಿಕೆಟ್ ಕಬಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು 7 ಪಂದ್ಯಗಳಿಂದ 14 ವಿಕೆಟ್ ಪಡೆದುಕೊಂಡಿದ್ದಾರೆ. ಜತೆಗೆ 48 ಲಿಸ್ಟ್ ಎ ಪಂದ್ಯಗಳಿಂದ 81 ವಿಕೆಟ್ ಸಾಧನೆ ಮಾಡಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಕೂಡ ಅದ್ಭುತ ಆಟವಾಡಿ ಆಯ್ಕೆ ಸಮಿತಿ ಗಮನ ಸೆಳೆದಿದ್ದರು.

ಕೃನಾಲ್​ ಪಾಂಡ್ಯ

ಇದನ್ನೂ ಓದಿ: ಏಕದಿನ ಸರಣಿ ಟೀಮ್​ ಇಂಡಿಯಾ ಪ್ರಕಟ: ಸೂರ್ಯಕುಮಾರ್, ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಮಣೆ

2015ರಲ್ಲಿ ಬಾಂಗ್ಲಾದೇಶ ಎ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಬಳಿಕ ಪ್ರಸಿದ್ಧ್​ ಕೃಷ್ಣ ಹೆಸರು ಹೆಚ್ಚು ಪ್ರಚಾರಕ್ಕೆ ಬಂದಿತ್ತು. ಇದಾದ ಬಳಿಕ ಐಪಿಎಲ್​ನಲ್ಲೂ ಉತ್ತಮ ಸಾಧನೆ ತೋರಿದ್ದರಿಂದ ಇದೀಗ ಟೀಂ ಇಂಡಿಯಾ ಸೇರಿಕೊಳ್ಳುವ ಅವಕಾಶ ಒದಗಿ ಬಂದಿದೆ. ಇವರ ಜತೆಗೆ ಆಲ್​ರೌಂಡರ್​ ಕೃನಾಲ್​ ಪಾಂಡ್ಯ ಹಾಗೂ ಬ್ಯಾಟ್ಸ್​ಮನ್​ ಸೂರ್ಯಕುಮಾರ್​ ಯಾದವ್ ಕೂಡ ಏಕದಿನ ತಂಡದಲ್ಲಿ ಅವಕಾಶ ಗಿಟ್ಟಿಸಿದ್ದಾರೆ.

ಸೂರ್ಯಕುಮಾರ್ ಯಾದವ್​​

ABOUT THE AUTHOR

...view details