ಶಾರ್ಜಾ : ಕಿಂಗ್ಸ್ ಇಲೆವೆನ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಿಡಿಲಬ್ಬರದ ಶತಕ ದಾಖಲಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ ಹಾಗೂ ಮಯಾಂಕ್ ಈಗಾಗಲೇ 183 ರನ್ಗಳ ಬೃಹತ್ ಜೊತೆಯಾಟ ನೀಡಿದ್ದಾರೆ.
ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದ ಮಯಾಂಕ್ ಅಗರ್ವಾಲ್ 9 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಿಡಿಸಿದರು. ಇವರು ಔಟಾಗುವ ಮುನ್ನ 50 ಎಸೆತಗಳಲ್ಲಿ 10 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 106 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ರಾಹಲ್ 54 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 69 ರನ್ಗಳಿಸಿ ಔಟಾದರು.
ಅಗರ್ವಾಲ್ 45 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ಭಾರತದ ಪರ ವೇಗವಾಗಿ ಶತಕ ದಾಖಲಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಮೊದಲು 2010ರಲ್ಲಿ ಯೂಸುಫ್ ಪಠಾಣ್ 37 ಎಸೆತಗಳಲ್ಲಿ ಶತಕ ಸಿಡಿಸಿರುವುದು ಈವರೆಗಿನ ಭಾರತೀಯನ ದಾಖಲೆಯಾಗಿದೆ.
ಭಾರತದ ಪರ ವೇಗವಾಗಿ ಶತಕ ಸಿಡಿಸಿದ ಬ್ಯಾಟ್ಸ್ಮನ್ಗಳು
- ಯೂಸುಫ್ ಪಠಾಣ್ (37 ಎಸೆತ) vs ಮುಂಬೈ ಇಂಡಿಯನ್ಸ್ 2010
- ಮಾಯಾಂಕ್ ಅಗರ್ವಾಲ್ (45 ಎಸೆತ)vs ರಾಜಸ್ಥಾನ್ ರಾಯಲ್ಸ್ 2020
- ಮುರಳಿ ವಿಜಯ್ (46 ಎಸೆತ) vs ರಾಜಸ್ಥಾನ್ ರಾಯಲ್ಸ್ 2010
- ವಿರಾಟ್ ಕೊಹ್ಲಿ (47 ಎಸೆತ) vs ಕಿಂಗ್ಸ್ ಇಲೆವೆನ್ ಪಂಜಾಬ್ 2016
- ವಿರೇಂದ್ರ ಸೆಹ್ವಾಗ್ (48 ಎಸೆತ) vs ಡೆಕ್ಕನ್ ಚಾರ್ಜಸ್ ಹೈದರಾಬಾದ್ 2011