ಕರ್ನಾಟಕ

karnataka

ETV Bharat / sports

ಅಗರ್​ವಾಲ್​ ಏಕಾಂಗಿ ಹೋರಾಟ ವ್ಯರ್ಥ: ಸೂಪರ್​​ ಓವರ್​ನಲ್ಲಿ ಡೆಲ್ಲಿಗೆ ಗೆಲುವು ತಂದುಕೊಟ್ಟ ರಬಾಡ - ಡೆಲ್ಲಿಗೆ ಸೂಪರ್​ ಜಯ

ಡೆಲ್ಲಿ ನೀಡಿದ 158 ರನ್​ಗಳ ಗುರಿ ಬೆನ್ನತ್ತಿದ ಕಿಂಗ್ಸ್​ ಇಲೆವೆನ್​ ಪಂಜಾಬ್​ ನಿಗಧಿಕ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್​ಗಳಿಸಿ ಟೈ ಮಾಡಿಕೊಂಡಿತು. ಆದರೆ ರಬಾಡ ಎಸೆದ ಸೂಪರ್ ಓವರ್​ನಲ್ಲಿ ಕೇವಲ 2 ರನ್​ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ತಂಡ ಕೇವಲ 2 ಎಸೆತಗಳಲ್ಲಿ 3 ರನ್​ಗಳಿಸಿ 13ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿತು.

ಕಿಂಗ್ಸ್​ ಇಲೆವೆನ್​ ಪಂಜಾಬ್​ vs ಡೆಲ್ಲಿ ಕ್ಯಾಪಿಟಲ್
ಕಿಂಗ್ಸ್​ ಇಲೆವೆನ್​ ಪಂಜಾಬ್​ vs ಡೆಲ್ಲಿ ಕ್ಯಾಪಿಟಲ್

By

Published : Sep 21, 2020, 12:08 AM IST

ದುಬೈ:ರಬಾಡರ ಅದ್ಭುತ ಬೌಲಿಂಗ್​ ನೆರವಿನಿಂದ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡವನ್ನು ಸೂಪರ್​ ಓವರ್​ನಲ್ಲಿ ಮಣಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್​ ತಂಡ 13ನೇ ಆವೃತ್ತಿಯ ಐಪಿಎಲ್​ನಲ್ಲಿ ಶುಭಾರಂಭ ಮಾಡಿದೆ.

ಡೆಲ್ಲಿ ನೀಡಿದ 158 ರನ್​ಗಳ ಗುರಿ ಬೆನ್ನತ್ತಿದ ಕಿಂಗ್ಸ್​ ಇಲೆವೆನ್​ ಪಂಜಾಬ್​ ನಿಗಧಿಕ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್​ಗಳಿಸಿ ಟೈ ಮಾಡಿಕೊಂಡಿತು. ಆದರೆ ರಬಾಡ ಎಸೆದ ಸೂಪರ್ ಓವರ್​ನಲ್ಲಿ 2 ವಿಕೆಟ್​ ಕಳೆದುಕೊಂಡು ಕೇವಲ 2 ರನ್​ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ತಂಡ ಕೇವಲ 2 ಎಸೆತಗಳಲ್ಲಿ 3 ರನ್​ಗಳಿಸಿ 13ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿತು.

ಮೊದಲು ಬ್ಯಾಟಿಂಗ್​ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್​ ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ 53 ರನ್​, ಪಂತ್​ 31 ಹಾಗೂ ಶ್ರೇಯಸ್​ ಅಯ್ಯರ್ 39 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 157 ರನ್​ಗಳಿಸಿತ್ತು.

ಪಂಜಾಬ್ ತಂಡದ ಪರ ಮೊಹಮ್ಮದ್​ ಶಮಿ 15 ರನ್​ ನೀಡಿ 3 ವಿಕೆಟ್​, ಶೆಲ್ಡಾನ್​ ಕಾಟ್ರೆಲ್​ 24 ರನ್​ ನೀಡಿ 2 ವಿಕೆಟ್​ ಪಡೆದರೆ ಇಂದೇ ಪದಾರ್ಪಣೆ ಮಾಡಿದ ರವಿ ಬಿಷ್ಣೋಯ್​ 22 ರನ್​ ನೀಡಿ ಒಂದು ವಿಕೆಟ್​ ಪಡೆದರು

​158 ರನ್​ಗಳ ಟಾರ್ಗೆಟ್​ ಪಡೆದ ಕಿಂಗ್ಸ್​ ಇಲೆವೆನ್ ಪಂಜಾಬ್​ 7 ಓವರ್​ಗಳಾಗುಷ್ಟರಲ್ಲಿ ನಾಯಕ ರಾಹುಲ್​(21), ಕರುಣ್ ನಾಯರ್​(1), ನಿಕೋಲಸ್​ ಪೂರನ್​(0) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್​(1) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.

ನಂತರ ಬಂದ ಸರ್ಫರಾಜ್​ ಖಾನ್​ ಆಟ 12 ರನ್​ಗಳಿಗೆ ಸೀಮಿತವಾಯಿತು. ಈ ಹಂತದಲ್ಲಿ ಮಯಾಂಕ್ ಅಗರ್​ವಾಲ್​(89)ಜೊತೆಯಾದ ಕೆ. ಗೌತಮ್​(20) 6ನೇ ವಿಕೆಟ್​ಗೆ 46 ರನ್​ಗಳ ಜೊತೆಯಾಟ ನಡೆಸಿದರು. ಗೌತಮ್​ ಔಟಾಗುತ್ತಿದ್ದಂತೆ ಮಯಾಂಕ್​ ಅಬ್ಬರದ ಬ್ಯಾಟಿಂಗ್​ ಮುಂದಾದರು.

ಕೊನೆಯ 3 ಓವರ್​ಳಲ್ಲಿ ಗೆಲುವಿಗೆ 42 ರನ್​ಗಳ ಅಗತ್ಯವಿತ್ತು. ಮಯಾಂಕ್, ಮೋಹಿತ್​ ಶರ್ಮಾ ಎಸೆದ 18 ಓವರ್​ನಲ್ಲಿ ಓವರ್​ನಲ್ಲಿ 17 ರನ್​, ರಬಾಡ ಎಸೆದ 19 ನೇ ಓವರ್​ನಲ್ಲಿ 12 ರನ್​ ಚಚ್ಚಿದರು. ಕೊನೆಯ ಓವರ್​ನಲ್ಲಿ 6 ಎಸೆತಕ್ಕೆ 13 ರನ್​ಗಳ ಅಗತ್ಯವಿತ್ತು. ಸ್ಟೋಯ್ನಿಸ್​ ಎಸೆದ ಮೊದಲ ಮೂರು ಎಸೆತಗಳಲ್ಲಿ ಒಂದು ಸಿಕ್ಸರ್, ಬೌಂಡರಿ ಹಾಗೂ 2 ರನ್​ ಸಹಿತ 12 ರನ್​ಗಳಿಸಿದರು. ನಾಲ್ಕನೇ ಎಸೆತ ಡಾಟ್​ ಮಾಡಿದ ಅಗರ್​ವಾಲ್​ 5ನೇ ಎಸೆತದಲ್ಲಿ ಔಟ್ ಆದರು. 6ನೇ ಎಸೆತದಲ್ಲಿ ಜೋರ್ಡಾನ್ ಔಟಾಗುವುದರೊಂದಿಗೆ ಪಂದ್ಯ ಟೈ ಆಯಿತು.

ಮಯಾಂಕ್ ಅಗರ್​ವಾಲ್ 60 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 7 ಬೌಂಡರಿ ಸಹಿತ 89 ರನ್​ಗಳಿಸಿದ್ದರು. ಆದರೆ ಅವರ​ ಬದಲು ಸೂಪರ್​ ಓವರ್​ಗೆ ಬಂದ ರಾಹುಲ್​ 2 ಎಸೆತಗಳನ್ನೆದುರಿಸಿ 2 ರನ್​ಗಳಿಸಿ ಔಟಾದರು. 3ನೇ ಎಸೆತದಲ್ಲಿ ಪೂರನ್​ ಬೌಲ್ಡ್​ ಆಗುವುದರೊಂದಿಗೆ ಪಂಜಾಬ್​ ಗೆಲುವಿನ ಆಸೆ ಕಮರಿತು. ಪಂಜಾಬ್​ ನೀಡಿದ 3 ರನ್​ಗಳನ್ನು ಡೆಲ್ಲಿ 3 ಎಸೆತಗಳಲ್ಲಿ ತಲುಪಿ ಜಯ ಸಾಧಿಸಿತು.

ಅರ್ಧಶತಕ ಹಾಗೂ ಕೊನೆಯ ಓವರ್​ನಲ್ಲಿ 2 ವಿಕೆಟ್​ ಪಡೆದು ಟೈ ಆಗಲು ನರವಾಗಿದ್ದ ಮಾರ್ಕಸ್​ ಸ್ಟೋಯ್ನಿಸ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ABOUT THE AUTHOR

...view details