ಪುಣೆ:ಮಯಾಂಕ್ ಶತಕ(108) ಹಾಗೂ ನಾಯಕ ಕೊಹ್ಲಿ ಅರ್ಧಶತಕದ ನೆರವಿನಿಂದ ದಕ್ಷಿಣ ಅಫ್ರಿಕಾ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಮೊದಲ ದಿನದಂತ್ಯಕ್ಕೆ ಭಾರತ ತಂಡ 3 ವಿಕೆಟ್ ಕಳೆದುಕೊಂಡು 273 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕೊಹ್ಲಿ ಪಡೆ ಆರಂಭದಲ್ಲೇ ರೋಹಿತ್ ಶರ್ಮಾ(14) ವಿಕೆಟ್ ಕಳೇದುಕೊಂಡು ಆಘಾತ ಅನುಭವಿಸಿತು. ಆದರೆ ಮಯಾಂಕ್ ಹಾಗೂ ಪೂಜಾರ (58) ಎರಡನೇ ವಿಕೆಟ್ ಜೊತೆಯಾಟದಲ್ಲಿ 148 ರನ್ ಸೇರಿಸಿ ಆಘಾತದಿಂದ ಮೇಲೆತ್ತಿದರು.
ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಈ ಜೋಡಿಯನ್ನು ರಬಾಡ ಬೇರ್ಪಡಿಸಿದರು. 112 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 58 ರನ್ಗಳಿಸಿ ಪುಜಾರ ಔಟಾದರೆ, ಅಗರ್ವಾಲ್ ಶತಕ ಪೂರ್ತಿಯಾಗುತ್ತಿದ್ದಂತೆ ರಬಾಡ ಬೌಲಿಂಗ್ನಲ್ಲೇ ವಿಕೆಟ್ ಒಪ್ಪಿಸಿದರು. ಅಗರ್ವಾಲ್ 195 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 16 ಬೌಂಡರಿ ಸಿಡಿಸಿದ್ದರು.
ನಾಯಕ ಕೊಹ್ಲಿ ಅರ್ಧಶತಕ ದಾಖಲಿಸಿದ್ದು ರಹಾನೆ ಜೊತೆ 75 ರನ್ ಸೇರಿಸಿದ್ದಾರೆ. ಕೊಹ್ಲಿ 63 ರನ್ ಹಾಗೂ ರಹಾನೆ 18 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಟೀಮ್ ಇಂಡಿಯಾ ಕಳೆದುಕೊಂಡಿರುವ 3 ವಿಕೆಟ್ಗಳು ವೇಗಿ ಕಗಿಸೋ ರಬಡಾ ಪಾಲಾದವು.