ವಿಶಾಖಪಟ್ಟಣ:ಭಾರತ ತಂಡದ ಪರ ಭಾರತದ ನೆಲದಲ್ಲಿ ಮೊದಲ ಪಂದ್ಯವಾಡುತ್ತಿರುವ ಕರ್ನಾಟಕದ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಮೊದಲ ಶತಕವನ್ನೇ ದ್ವಿಶತಕವಾಗಿ ಪರಿವರ್ತಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದ ವೈ ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರವ ಮೊದಲ ಪಂದ್ಯದಲ್ಲಿ ರೋಹಿತ್ ಜೊತೆಗೂಡಿ ದಾಖಲೆಯ 317 ರನ್ಗಳ ಜೊತೆಯಾಟ ನೀಡಿದ ಅಗರ್ವಾಲ್, ಹಿಟ್ಮ್ಯಾನ್ ರೋಹಿತ್ ಔಟಾದ ನಂತರವೂ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರಿಸಿ ಚೊಚ್ಚಲ ಟೆಸ್ಟ್ ಶತಕವನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿದ್ದಾರೆ.