ಇಂದೋರ್:ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ದಿನದಿಂದಲೂ ಆಯ್ಕೆ ಸಮಿತಿ ಹಾಗೂ ನಾಯಕನ ನಂಬಿಕೆಯನ್ನು ಉಳಿಸುತ್ತಲೇ ಬಂದಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಇಂದೋರ್ ಟೆಸ್ಟ್ನಲ್ಲಿ ದ್ವಿಶತಕದ ಮೂಲಕ ಹಲವು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
100+ ಆದಾಗ 200ಕ್ಕೆ, 200+ ಆಗ್ತಿದ್ದಂತೆ ಮಯಾಂಕ್‌ಗೆ ಕೊಹ್ಲಿ ಸನ್ನೆ ಮಾಡಿ ಹೇಳಿದ್ದೇನು ನೋಡಿ!
ಮಯಾಂಕ್ ಅಗರ್ವಾಲ್ ಇಂದಿನ ದ್ವಿಶತಕ ಇನ್ನಿಂಗ್ಸ್ನಲ್ಲಿ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ದಾಖಲೆ ಬ್ರೇಕ್ ಆಗಿದೆ. 12 ಟೆಸ್ಟ್ ಇನ್ನಿಂಗ್ಸ್ನಲ್ಲಿ 2ನೇ ದ್ವಿಶತಕ ಸಿಡಿಸುವ ಮೂಲಕ ಮಯಾಂಕ್ ಈ ವಿಚಾರದಲ್ಲಿ ಬ್ರಾಡ್ಮನ್ರನ್ನು ಹಿಂದಿಕ್ಕಿದ್ದಾರೆ. ಬ್ರಾಡ್ಮನ್ 13 ಇನ್ನಿಂಗ್ಸ್ನಲ್ಲಿ 2ನೇ ದ್ವಿಶತಕ ಬಾರಿಸಿದ್ದರು. ಆದರೆ, ಭಾರತೀಯರೇ ಆದ ವಿನೋದ್ ಕಾಂಬ್ಳಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಕೇವಲ ಐದೇ ಇನ್ನಿಂಗ್ಸ್ನಲ್ಲಿ 2 ದ್ವಿಶತಕ ಸಿಡಿಸಿದ್ದರು.
ಒಂದು ಕ್ಯಾಲೆಂಡರ್ ವರ್ಷದಲ್ಲಿ ಎರಡು ದ್ವಿಶತಕ ಸಿಡಿಸಿದ 2ನೇ ಭಾರತೀಯ ಆಟಗಾರ ಎನ್ನುವ ಹಿರಿಮೆಗೂ ಮಯಾಂಕ್ ಪಾತ್ರರಾಗಿದ್ದಾರೆ. ವಿನೂ ಮಂಕಡ್ 1955/56 ಈ ಸಾಧನೆ ಮಾಡಿದ್ದರು.
ಮೈದಾನದಲ್ಲಿ ಮಯಾಂಕ್ ಮಾಯೆ! ಸೆಹ್ವಾಗ್ ಮಾದರಿ ಸಿಡಿಲಬ್ಬರದ ದ್ವಿಶತಕ!
ಟೆಸ್ಟ್ ಮಾದರಿಯಲ್ಲಿ ಆರಂಭಿಕ ಆಟಗಾರ ಅತಿಹೆಚ್ಚು ಗಳಿಕೆಯಲ್ಲಿ ಮಯಾಂಕ್ ವೀರೇಂದ್ರ ಸೆಹ್ವಾಗ್ ನಂತರದ ಸ್ಥಾನದಲ್ಲಿದ್ದಾರೆ. ಸೆಹ್ವಾಗ್(319,309,293,254) ರನ್ ಗಳಿಸಿದ್ದಾರೆ. ಇಂದಿನ 243 ರನ್ ಮೂಲಕ ಮಯಾಂಕ್ ದಿಗ್ಗಜ ಆಟಗಾರನ ನಂತರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಯಾಂಕ್ ಅಗರ್ವಾಲ್ರನ್ನು ಅಭಿನಂದಿಸುತ್ತಿರುವ ಬಾಂಗ್ಲಾ ಆಟಗಾರರು..
ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರರ ಸಾಲಿನಲ್ಲಿ ಮಯಾಂಕ್ ಅಗರ್ವಾಲ್ ಸದ್ಯ ನವಜೋತ್ ಸಿಂಗ್ ಸಿಧು ಜೊತೆ ಜಂಟಿಯಾಗಿ ಅಗ್ರಸ್ಥಾನ ಪಡೆದಿದ್ದಾರೆ. ಮಯಾಂಕ್ ಇನ್ನಿಂಗ್ಸ್ನಲ್ಲಿ 8 ಸಿಕ್ಸರ್ ಬಂದಿದ್ದರೆ, ಸಿಧು1994ರಲ್ಲಿ ಶ್ರೀಲಂಕಾ ವಿರುದ್ಧ ಲಖನೌ ಟೆಸ್ಟ್ನಲ್ಲಿ 8 ಸಿಕ್ಸರ್ ಬಾರಿಸಿದ್ದರು. ಆ ವೇಳೆ ಸಿಧು ಗಳಿಸಿದ್ದು124 ರನ್ ಎನ್ನುವುದು ವಿಶೇಷ.