ಪುಣೆ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಆಕರ್ಷಕ ಶತಕ ಸಿಡಿಸಿದ್ದಾರೆ.
ಹರಿಣಗಳ ಮೇಲೆ ಕನ್ನಡಿಗನ ಅಬ್ಬರ...ಶತಕ ಸಿಡಿಸಿ ಮಿಂಚಿದ ಮಯಾಂಕ್...! - ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಶತಕ ಬಾರಿಸಿದ್ದಾರೆ.
ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಬೌಂಡರಿಗಳನ್ನು ಸಿಡಿಸುತ್ತಾ ರನ್ ಹಿಗ್ಗಿಸುತ್ತಾ ಸಾಗಿದರು. ಒಂದೆಡೆ ರೋಹಿತ್ ವಿಕೆಟ್ ಉರುಳಿದರೂ ಮಯಾಂಕ್ ಆಫ್ರಿಕನ್ ಬೌಲರ್ಗಳನ್ನು ದಂಡಿಸುತ್ತಾ ಅರ್ಧಶತಕದ ಗಡಿ ದಾಟಿದರು.
ಅರ್ಧಶತಕದ ಬಳಿಕವೂ ಎಂದಿನಂತೆ ಆಕರ್ಷಕ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಶತಕದತ್ತ ಮುನ್ನುಗ್ಗಿದರು. 183 ಎಸೆತದಲ್ಲಿ ಮಯಾಂಕ್ ಅಗರ್ವಾಲ್ ನೂರರ ಗಡಿ ಮುಟ್ಟಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಮಯಾಂಕ್ ಈ ಇನ್ನಿಂಗ್ಸ್ನಲ್ಲಿ 2 ಸಿಕ್ಸರ್ ಹಾಗೂ 17 ಬೌಂಡರಿಗಳಿದ್ದವು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕನ್ನಡಿಗನ ಪರಾಕ್ರಮ ಮುಂದುವರೆದಿದೆ. ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮಯಾಂಕ್ ದ್ವಿಶತಕ(215) ಗಳಿಸಿದ್ದರು.