ಪುಣೆ: ದ. ಅಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲೂ ಶತಕ ಸಿಡಿಸಿ ಮಿಂಚುತ್ತಿರುವ ಕನ್ನಡಿಗ ಅಗರ್ವಾಲ್ ಪಂದ್ಯಕ್ಕೂ ಮುನ್ನ ತಮ್ಮ ಆಹಾರ ಕ್ರಮದ ಬಗ್ಗೆ ಹೇಳಿದ್ದಾರೆ.
ಮಯಾಂಕ್ ಪಂದ್ಯಕ್ಕೂ ಮುನ್ನ ಕೇವಲ 2 ಎರಡು ಇಡ್ಲಿ ಹಾಗೂ ತೆಂಗಿನ ಕಾಯಿ ಚಟ್ನಿ ಮಾತ್ರ ಸೇವಿಸುವುದಾಗಿ ಹೇಳಿದ್ರು.

ಪ್ರಥಮ ದರ್ಜೆ ಕ್ರಿಕೆಟ್ನ ಫಾರ್ಮ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಮುಂದುವರಿಸುತ್ತಿರುವುದರ ಬಗ್ಗೆ ಮಾತನಾಡಿರುವ ಯುವ ಕ್ರಿಕೆಟಿಗ, ದೇಶಿ ಕ್ರಿಕೆಟ್ನಲ್ಲಿ ಸಾಕಷ್ಟು ರನ್ಗಳಿಸಿದಾಗ ವಿದೇಶದಲ್ಲಿ ಭಾರತ ಎ ತಂಡದ ಪರ ಆಡಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿತ್ತು. ಇದರಿಂದ ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ವಿರುದ್ಧ ಕ್ವಾಲಿಟಿ ಬೌಲಿಂಗ್ ಎದುರಿಸಲು ಉತ್ತಮ ಅವಕಾಶ ಸಿಕ್ಕಿತ್ತು. ಜೊತೆಗೆ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದೆದುರು ಪದಾರ್ಪಣೆ ಮಾಡಿ ರನ್ಗಳಿಸುವಲ್ಲಿ ಯಶಸ್ವಿಯಾದೆ ಎಂದು ತಿಳಿಸಿದ್ದಾರೆ.
ರಣಜಿಯಂತಹ ಸುದೀರ್ಘ ಸರಣಿಯಲ್ಲಿ ಪಾಲ್ಗೊಳ್ಳುವುದರಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ರನ್ಗಳಿಸಲು ಸುಲಭವಾಗಿದೆ ಎಂದು ಅವರು ಇದೇ ವೇಳೆ ಹೇಳಿಕೊಂಡಿದ್ದಾರೆ.
ಪೂಜಾರ-ಮಯಾಂಕ್ ಸಂದರ್ಶನ ವೀಕ್ಷಿಸಿ http://www.bcci.tv/vijay-hazare-trophy-2019-20/match/59