ಕೋಲ್ಕತ್ತಾ:ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸುತ್ತಿರುವ ಕರ್ನಾಟಕದ ರನ್ ಮಷಿನ್ ಮಯಾಂಕ್ ಅಗರವಾಲ್ ಈಗಾಗಲೇ 8 ಪಂದ್ಯಗಳಿಂದ 71.50ರ ಸರಾಸರಿಯಲ್ಲಿ ಮೂರು ಶತಕ ಹಾಗೂ ಎರಡು ದ್ವಿಶತಕ ಸಿಡಿಸಿ ಮಿಂಚಿದ್ದು, ಇಂದಿನಿಂದ ಆರಂಭಗೊಳ್ಳಲಿರುವ ಹಗಲು-ರಾತ್ರಿ ಪಂದ್ಯದಲ್ಲಿ ಹೊಸದೊಂದು ದಾಖಲೆ ಸರಿಗಟ್ಟಲು ಸಜ್ಜುಗೊಂಡಿದ್ದಾರೆ.
ಈಡನ್ ಗಾರ್ಡನ್ ಮೈದಾನದಲ್ಲಿ ಇಂದಿನಿಂದ ಬಾಂಗ್ಲಾ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆರಂಭಗೊಳ್ಳುತ್ತಿದ್ದು, ಈ ಪಂದ್ಯದಲ್ಲಿ ಆರಂಭಿಕ ಮಯಾಂಕ್ ಅಗರವಾಲ್ 142ರನ್ಗಳಿಕೆ ಮಾಡಿದ್ರೆ ಕೇವಲ 13 ಇನ್ನಿಂಗ್ಸ್ಗಳಿಂದ 1000 ರನ್ಗಳಿಕೆ ಮಾಡುವ ಸಾಧನೆ ಮಾಡಲಿದ್ದು, ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ದಾಖಲೆ ಸಮಗೊಳಿಸಲಿದ್ದಾರೆ.