ಚೆನ್ನೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ತಮ್ಮ ವಿಶೇಷ ವಿನ್ಯಾಸ ಮಂಗೂಸ್ ಬ್ಯಾಟ್ ಕುರಿತು ಧೋನಿ ನೀಡಿದ್ದ ಪ್ರತಿಕ್ರಿಯೆಯನ್ನು ಬಹಿರಂಗಗೊಳಿಸಿದ್ದಾರೆ.
ದಶಕದ ಹಿಂದೆ ವಿಶ್ವದ ಸ್ಫೋಟಕ ಆಟಗಾರರಲ್ಲಿ ಒಬ್ಬರಾಗಿದ್ದ ಆಸೀಸ್ ಮ್ಯಾಥ್ಯೂ ಹೇಡನ್ ತಮ್ಮ ಆಟದ ಜೊತೆಗೆ ತಮ್ಮ ಮಂಗೂಸ್ ಬ್ಯಾಟ್ನಿಂದಲೂ ಹೆಚ್ಚು ಪ್ರಸಿದ್ದವಾಗಿದ್ದರು.
2010ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಹೇಡನ್ ತಮ್ಮ ದೊಡ್ಡದಾದ ಹ್ಯಾಂಡಲ್ ಹಾಗೂ ಚೆಂಡನ್ನು ಹೊಡೆಯುವ ಭಾಗ ಚಿಕ್ಕದಿರುವ ಬ್ಯಾಟ್ ಉಪಯೋಗಿಸಿ ಕೇವಲ 43 ಎಸೆತಗಳಲ್ಲಿ 93 ರನ್ಗಳಿಸಿ ಸಿಎಸ್ಕೆ 186 ರನ್ಗಳ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು.
ಆದರೆ, ನಾಯಕ ಎಂಸ್ ಧೋನಿ ಸೇರಿದಂತೆ ಪ್ರಾಂಚೈಸಿಯ ಅನೇಕ ಸದಸ್ಯರು ಹೇಡನ್ ಮಂಗೂಸ್ ಬ್ಯಾಟ್ ಉಪಯೋಗಿಸುವ ಮೊದಲು ಅದರ ಅಭಿಮಾನಿಗಳಾಗಿರಲಿಲ್ಲ ಎಂದು ಆಸೀಸ್ ದಂತಕತೆ ನಿರೂಪಕಿ ರೂಪ ರಮಣಿ ನಡೆಸಿಕೊಟ್ಟ ಸಿಎಸ್ಕೆ ಲೈವ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಮಂಗೂಸ್ ಬ್ಯಾಟ್ನಲ್ಲಿ ಚೆಂಡನ್ನು ಗ್ರಹಿಕೆ ಮಾಡುವುದು ಕಷ್ಟು ಎಂಬುದನ್ನು ನಾನು ಬಹಳಷ್ಟು ಮಂದಿಯಿಂದ ಕೇಳಿದ್ದೆ. ಈ ಉತ್ಪನ್ನದ ಬಗ್ಗೆ ನಾನು ಹಲವಾರು ಆಟಗಾರರಿಂದ ಸಾಕಷ್ಟು ಪ್ರಶ್ನೆಗಳನ್ನು ಎದುರಿಸಿದ್ದೆ. ಅರ್ಧ ವಿನ್ಯಾಸದ ಬ್ಯಾಟ್ ಅನ್ನು ಹೇಗೆ ಉಪಯೋಗಿಸುವುದು ಹೇಗೆ ಎಂದು ಕೇಳಿದ್ದರು. ಎಂಎಸ್ ಧೋನಿಯೂ ಕೂಡ ನೀವು ನಿಮ್ಮ ಜೀವನದಲ್ಲಿ ಬಯಸುವಂತಹದ್ದನ್ನೆಲ್ಲ ನಾನು ಕೊಡುತ್ತೇನೆ, ದಯವಿಟ್ಟು ಈ ಬ್ಯಾಟ್ ಬಳಸಬೇಡಿ ಎಂದು ಧೋನಿ ಹೇಳಿದ್ದರೆಂದು ಹೇಡನ್ ಬಹಿರಂಗಪಡಿಸಿದ್ದಾರೆ.
ಆ ಸಂದರ್ಭದಲ್ಲಿ ನಾನು, ಗೆಳೆಯ, ನಾನು ಈ ಬ್ಯಾಟ್ನಲ್ಲಿ ಒಂದೂವರೆ ವರ್ಷದಿಂದ ನೆಟ್ನಲ್ಲಿ ಅಭ್ಯಾಸ ಮಾಡಿದ್ದೇನೆ. ನಾನು ಹೇಳುವುದೇನಂದರೆ, ಈ ಬ್ಯಾಟ್ನ ಮಧ್ಯ ಭಾಗದಿಂದ ಚೆಂಡಿಗೆ ಹೊಡೆದರೂ 20 ಮೀಟರ್ ದೂರ ಹೋಗುತ್ತದೆ. ಇದು ನಿಜ, ಚೆಂಡುಗಳು ಈ ಬ್ಯಾಟ್ನಿಂದ ಕಣ್ಮರೆಯಾಗುತ್ತವೆ, ಅದು ಯಾವಾಗಲು ಹಾಗೆ ಇರುತ್ತದೆ ಎಂದು ವಿವರಿಸಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ತಾವೂ ಮಂಗೂಸ್ ಬ್ಯಾಟ್ ಏಕೆ ಉಪಯೋಗಿಸುತ್ತೇನೆ ಎಂಬದನ್ನು ಈ ಸಮಯದಲ್ಲಿ ರಿವೀಲ್ ಮಾಡಿರುವ ಅವರು, ನಾನು ನನ್ನ ಕೆಟ್ಟ ಪ್ರದರ್ಶನದಿಂದ ನನ್ನ ಪ್ರಾಂಚೈಸಿಯನ್ನು ಕಷ್ಟಕ್ಕೆ ದೂಡುವುದನ್ನು ಬಯಸುತ್ತಿರಲಿಲ್ಲ. ಈ ವಸ್ತುವನ್ನು ಉಪಯೋಗಿಸುವ ಮೊದಲು ಮನೆಯಲ್ಲಿ ಸಾಕಷ್ಟು ಬಾರ ತಯಾರಿ ನಡೆಸುತ್ತಿದ್ದೆ. ಇನ್ನು ನಾನು ಸದಾ ಈ ಬ್ಯಾಟ್ ಉಪಯೋಗಿಸುತ್ತಿರಲಿಲ್ಲ. ಅದನ್ನು ಬಳಸಲು ನಾನು ಸಿದ್ದ ಎಂದಾಗ, ಕೆಲವು ಸಮಯ ಪಂದ್ಯದ ಮಧ್ಯದಲ್ಲಿ ಬಳಸುತ್ತಿದ್ದೆ ಎಂದು ಹೇಡನ್ ತಿಳಿಸಿದ್ದಾರೆ.