ಕರ್ನಾಟಕ

karnataka

ETV Bharat / sports

ಈ ಬಾರಿ ಐಪಿಎಲ್​ನಲ್ಲಿ ಈ ಮೂವರು ಭಾರತೀಯ ಬೌಲರ್​ಗಳು​ ಮಿಂಚಲಿದ್ದಾರೆ: ಮ್ಯಾಥ್ಯೂ ಹೇಡನ್​ - Sunrisers Hyderabad fast bowler Bhuvneshwar Kumar

ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡಿರುವ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್​ಮನ್​ ಮ್ಯಾಥ್ಯೂ ಹೇಡನ್​ 2020ರ ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳಿಗೆ ತಲೆ ನೋವಾಗುವ ಮೂವರು ಬೌಲರ್​ಗಳನ್ನು ಹೆಸರಿಸಿದ್ದಾರೆ. ಅದರಲ್ಲಿ ಇಬ್ಬರು ವೇಗದ ಬೌಲರ್​ ಹಾಗೂ ಒಬ್ಬ ಸ್ಪಿನ್ನರ್​ ಇದ್ದಾರೆ.

ಮ್ಯಾಥ್ಯೂ ಹೇಡನ್​
ಮ್ಯಾಥ್ಯೂ ಹೇಡನ್​

By

Published : Sep 1, 2020, 11:08 PM IST

ನವದೆಹಲಿ:ವಿಶ್ವದ ಶ್ರೀಮಂತ ಟಿ20 ಲೀಗ್​ ಆಗಿರುವ ಐಪಿಎಲ್​ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೆ ಕೆಲವು ತಂಡಗಳು ಸಮರಭ್ಯಾಸ ಆರಂಭಿಸಿದ್ದು ಟ್ರೋಫಿ ಎತ್ತಿ ಹಿಡಿಯಲು ಹಾತೊರೆಯುತ್ತಿವೆ.

ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡಿರುವ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್​ಮನ್​ ಮ್ಯಾಥ್ಯೂ ಹೇಡನ್​ 2020ರ ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳಿಗೆ ತಲೆ ನೋವಾಗುವ ಮೂವರು ಬೌಲರ್​ಗಳನ್ನು ಹೆಸರಿಸಿದ್ದಾರೆ. ಅದರಲ್ಲಿ ಇಬ್ಬರು ವೇಗದ ಬೌಲರ್​ ಹಾಗೂ ಒಬ್ಬ ಸ್ಪಿನ್ನರ್​ ಇದ್ದಾರೆ.

ಹೇಡನ್​ ಪ್ರಕಾರ ಸನ್​ರೈಸರ್ಸ್​ ಹೈದರಾಬಾದ್​ನ ಅನುಭವಿ ಬೌಲರ್​ ಭುವನೇಶ್ವರ್​ ಕುಮಾರ್​, ಮುಂಬೈ ಇಂಡಿಯನ್ಸ್​ನ ವೇಗಿ ಜಸ್ಪ್ರೀತ್​ ಬುಮ್ರಾ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ನ ಹರ್ಭಜನ್​ ಸಿಂಗ್​ 13ನೇ ಆವೃತ್ತಿಯ ಸ್ಟಾರ್​ ಬೌಲರ್​ಗಳಾಗಲಿದ್ದಾರೆ ಎಂದು ಆಸೀಸ್​ ಸ್ಫೋಟಕ ಬ್ಯಾಟ್ಸ್​ಮನ್​ ಅಭಿಪ್ರಾಯ ಪಟ್ಟಿದ್ದಾರೆ.

ಸ್ವಿಂಗ್​ ಸ್ಪೆಷಲಿಸ್ಟ್​ ಆಗಿರುವ ಭುವನೇಶ್ವರ್​ ಕುಮಾರ್​ 2016 ಮತ್ತು 2017ರ ಐಪಿಎಲ್​ನಲ್ಲಿ ಪರ್ಪಲ್​ ಖ್ಯಾಪ್​ ಪಡೆದಿದ್ದರು. ಅವರು ಕ್ರಮವಾಗಿ 23 ಮತ್ತು 26 ವಿಕೆಟ್​ ಪಡೆದಿದ್ದರು.

ಇನ್ನು ಜಸ್ಪ್ರೀತ್​ ಬುಮ್ರಾ ಭಾರತದ ಅಗ್ರಮಾನ್ಯ ಬೌಲರ್​ ಆಗಿದ್ದು, ಅವರು ತಮ್ಮ ಯಾರ್ಕರ್​ಗಳಿಂದ ಬ್ಯಾಟ್ಸ್​ಮನ್ಸ್​ಗಳನ್ನು ಕಾಡಲಿದ್ದಾರೆ. ಸ್ಪಿನ್​ ವಿಭಾಗದಲ್ಲಿ ಹಳೆಯ ಆಟಗಾರರೇ ಮಿಂಚಲಿದ್ದಾರೆ. ಹರ್ಭಜನ್​ ಸಿಂಗ್ ಸಾಕಷ್ಟು ಕ್ರಿಕೆಟ್​ ಆಡದಿದ್ದರೂ ಅವರ ಅನುಭವ ಕೈ ಹಿಡಿಯಲಿದೆ. ಆಲ್​ರೌಂಡರ್​ ರವೀಂದ್ರ ಜಡೇಜಾ ಕೂಡ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಡನ್​ ಭವಿಷ್ಯ ನುಡಿದಿದ್ದಾರೆ.

ABOUT THE AUTHOR

...view details