ಲಂಡನ್ : ಭಾರತದಲ್ಲಿ ಮ್ಯಾಚ್ ಫಿಕ್ಸಿಂಗ್ ವಿರುದ್ಧ ವಿಶೇಷ ಕಾನೂನು ಜಾರಿಗೊಳಿಸಿದರೆ ಪಂದ್ಯವನ್ನು ರಕ್ಷಿಸಲು ಅದು ಏಕೈಕ ಅಸ್ತ್ರವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು)ದ ತನಿಖೆಯ ಸಂಯೋಜಕರಾದ ಸ್ಟೀವ್ ರಿಚರ್ಡ್‌ಸನ್ ಹೇಳಿದ್ದಾರೆ.
2021 ರಿಂದ 2023 ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಭಾರತವು ಎರಡು ಪ್ರಮುಖ ಪಂದ್ಯಗಳಾದ ಟಿ -20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಆಯೋಜಿಸಲಿದೆ. ಈ ಜಾಗತಿಕ ಪಂದ್ಯಾವಳಿಗಳು ಮ್ಯಾಚ್ ಫಿಕ್ಸರ್ಗಳು ಹೆಚ್ಚು ಫಿಕ್ಸಿಂಗ್ ಮಾಡುವ ಸಮಯವಾಗಿದೆ. ಸೀಮಿತ ಅಸ್ತ್ರಗಳೊಂದಿಗೆ ಇದನ್ನು ತಡೆಯುವುದು ಐಸಿಸಿಗೆ ಯಾವಾಗಲೂ ಸವಾಲಿನ ಕೆಲಸವಾಗಿದೆ ಎಂದು ರಿಚರ್ಡ್‌ಸನ್ ತಿಳಿಸಿದ್ದಾರೆ