ನವದೆಹಲಿ:ಮ್ಯಾಚ್ ಫಿಕ್ಸಿಂಗ್ ಎಂಬ ಭೂತ ಕ್ರಿಕೆಟ್ ರಂಗಕ್ಕೆ ಈಗಾಗಲೇ ಮಸಿ ಬಳಿದಾಗಿದೆ. ಹಲವು ಕ್ರಿಕೆಟರ್ಗಳು ಇದರಿಂದ ತಮ್ಮ ವೃತ್ತಿ ಬದುಕನ್ನ ಬಹುತೇಕ ಅಂತ್ಯಗೊಳಿಸಿಕೊಂಡಿದ್ದಾರೆ.
ಮಹಿಳಾ ಕ್ರಿಕೆಟ್ಗೂ ಅಂಟಿದ ಮ್ಯಾಚ್ ಫಿಕ್ಸಿಂಗ್ ಭೂತ.. ಬಿಸಿಸಿಐಗೆ ದೂರು - ಭಾರತೀಯ ಮಹಿಳಾ ತಂಡ
ಭಾರತೀಯ ಮಹಿಳಾ ತಂಡ ಇಂಗ್ಲೆಂಡ್ ಟೂರ್ ಹೊರಡುವ ಮುನ್ನ ಬುಕ್ಕಿಯೊಬ್ಬ ಮಹಿಳಾ ಕ್ರಿಕೆಟರ್‌ಬ್ಬರನ್ನ ಸಂಪರ್ಕಿಸಿದ್ದು, ಈ ಸಂಬಂಧ ಆ ಕ್ರಿಕೆಟರ್ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಸಮಿತಿಗೆ ದೂರು ನೀಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಭಾರತೀಯ ಮಹಿಳಾ ತಂಡ ಇಂಗ್ಲೆಂಡ್ ಟೂರ್ ಹೊರಡುವ ಮುನ್ನ ಬುಕ್ಕಿಯೊಬ್ಬ ಮಹಿಳಾ ಕ್ರಿಕೆಟರೊಬ್ಬರನ್ನ ಸಂಪರ್ಕಿಸಿದ್ದನಂತೆ. ಈ ಸಂಬಂಧ ಆ ಕ್ರಿಕೆಟರ್ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಸಮಿತಿಗೆ ದೂರು ನೀಡಿದ್ದಾರೆ.
ಜಿತೇಂದ್ರ ಕೊಠಾರಿ ಮತ್ತು ರಾಕೇಶ್ ಬಾಪ್ನಾ ಎಂಬ ಬುಕ್ಕಿಗಳು ಬೆಂಗಳೂರಿನಲ್ಲಿ ಈ ಕೃತ್ಯ ಮಾಡಿದ್ದರು ಎನ್ನಲಾಗಿದೆ. ಆ ಮಹಿಳಾ ಕ್ರಿಕೆಟರ್ ಯಾರೂ ಎಂಬುದು ಇನ್ನು ಗೊತ್ತಾಗಿಲ್ಲ. ಅವರು ಈಗಲೂ ಅಂತಾರಾಷ್ಟ್ರೀಯ ಕ್ರಿಕೆಟರ್ ಆಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಐಸಿಸಿ ತನಿಖೆ ಕೈಗೊಂಡಿದೆ. ಈ ಬಗ್ಗೆ ಮಾತನಾಡಿರುವ ಐಸಿಸಿ ಏಷ್ಯಾ ಮುಖ್ಯಸ್ಥ ಅಜಿತ್ ಸಿಂಗ್, ಬುಕ್ಕಿಗಳ ಬಗ್ಗೆ ಮಹಿಳಾ ಕ್ರಿಕೆಟರ್ ದೂರು ನೀಡಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.