ಕರ್ನಾಟಕ

karnataka

By

Published : Mar 5, 2020, 11:02 PM IST

ETV Bharat / sports

ದಶಕದ ಬಳಿಕ ಬಾಂಗ್ಲಾ ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಮುಶ್ರಫೆ ಮೊರ್ತಾಜ

ಕ್ರಿಕೆಟ್​ ಹೊರತಾಗಿ ಸಂಸದನೂ ಆಗಿರುವ 36 ವರ್ಷದ ಮೊರ್ತಾಜ ಬಾಂಗ್ಲಾ ಪರ 36 ಟೆಸ್ಟ್​, 219 ಏಕದಿನ ಹಾಗೂ 54 ಟಿ-20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ನಲ್ಲಿ 78 ವಿಕೆಟ್, ಏಕದಿನ ಕ್ರಿಕೆಟ್​ನಲ್ಲಿ 269 ಹಾಗೂ ಟಿ20ಯಲ್ಲಿ 42 ವಿಕೆಟ್​ ಪಡೆದಿದ್ದಾರೆ.

ಮುಶ್ರಫೆ ಮೊರ್ತಾಜ
ಮುಶ್ರಫೆ ಮೊರ್ತಾಜ

ಡಾಕಾ: ಕಳೆದ 10 ವರ್ಷಗಳಿಂದ ಬಾಂಗ್ಲಾದೇಶ ಕ್ರಿಕೆಟ್​ ತಂಡದ ನಾಯಕರಾಗಿದ್ದ ಮುಶ್ರಫೆ​ ಮೊರ್ತಾಜ ಶುಕ್ರವಾರ ನಡೆಯುವ ಜಿಂಬಾಬ್ವೆ ವಿರುದ್ಧದ ಕೊನೆಯ ಏಕದಿನ ಪಂದ್ಯದ ನಂತರ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

2001 ರಲ್ಲಿ ಬಾಂಗ್ಲಾದೇಶ ತಂಡದ ಪರ ಪದಾರ್ಪಣೆ ಮಾಡಿದ್ದ ಮೊರ್ತಾಜ ಕಳೆದ 10 ವರ್ಷಗಳಿಂದ ಬಾಂಗ್ಲಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಆದರೆ ಕಳೆದ ವರ್ಷ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿರುವ ಜೊತೆಗೆ ನಾಯಕತ್ವದಲ್ಲಿ ತಾನು ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಭಾರಿ ಟೀಕೆಗಳು ಕೇಳಿ ಬಂದಿದ್ದವು.

ವಿಶ್ವಕಪ್‌ ಬಳಿಕ ಕ್ರಿಕೆಟ್​ನಿಂದ ದೂರ ಉಳಿದಿದ್ದ ಮೊರ್ತಾಜ ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಮೂಲಕ ಡಾಕಾ ಡೈನಾಮೈಟ್ಸ್‌ ತಂಡವನ್ನು ಮುನ್ನಡೆಸಿದ್ದರು. ಆದರೆ ಡಾಕಾ ಪ್ಲೆ ಆಫ್ಸ್‌ ಹಂತದಲ್ಲೇ ಮುಗ್ಗರಿಸಿತ್ತು.

36 ವರ್ಷದ ಮೊರ್ತಾಜ ಇದೀಗ ಜಿಂಬಾಬ್ವೆ ವಿರುದ್ಧದ ಕೊನೆಯ ಏಕದಿನ ಪಂದ್ಯದ ನಂತರ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಅಲ್ಲದೆ ಬೌಲಿಂಗ್​ನಲ್ಲೂ ಫಾರ್ಮ್​ ಕಳೆದುಕೊಂಡಿರುವ ಅವರು ಶೀಘ್ರದಲ್ಲೇ ಕ್ರಿಕೆಟ್​ ಬದುಕಿಗೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈಗಾಗಲೇ ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥ ನಜ್ಮುಲ್ ಹಸನ್‌ ಮೊರ್ತಾಜ ಅವರಿಗೆ ಇದೇ ಕೊನೆಯ ಏಕದಿನ ಸರಣಿ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಟಿ20ಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಮೊರ್ತಾಜ ಅವರಿಂದ ತೆರವಾಗುವ ನಾಯಕತ್ವಕ್ಕೆ ತಂಡದ ಅನುಭವಿಗಳಾದ ಮಹಮದುಲ್ಲಾ, ರಹೀಮ್​ ಅಥವಾ ತಮೀಮ್​ ಇಕ್ಬಾಲ್ ಆಯ್ಕೆಯಾಗುವ ಸಾಧ್ಯತೆಯಿದೆ.

ABOUT THE AUTHOR

...view details