ಢಾಕಾ:ಬಾಂಗ್ಲಾದೇಶದ ಕ್ರಿಕೆಟಿಗ ಮುಶ್ರಫೆ ಮೊರ್ತಾಜ ಕೊರೊನಾ ವೈರಸ್ನಿಂದ ಬಳಲುತ್ತಿದ್ದಾರೆ.
ಸುಮಾರು 10 ದಿನಗಳಿಂದ ಕೋವಿಡ್ ಲಕ್ಷಣಗಳು ಇವರಲ್ಲಿ ಕಾಣಿಸಿಕೊಂಡಿದ್ದವು. ಆದರೆ ತದನಂತರ ಚೇತರಿಸಿಕೊಂಡಿದ್ದರು. ಇದಾದ ಬಳಿಕ ಕಳೆದ 3-4 ದಿನಗಳಿಂದ ಜ್ವರ ಹಾಗೂ ಶೀತ ಕಾಣಿಸಿಕೊಂಡಿದ್ದು, ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಇರುವುದು ಕನ್ಫರ್ಮ್ ಆಗಿದೆ.