ಡಾಕಾ:ಐಸಿಸಿಯಿಂದ 2 ವರ್ಷ ನಿಷೇಧಕ್ಕೊಳಗಾಗಿರುವ ಬಾಂಗ್ಲಾದೇಶದ ಮುಂಚೂಣಿ ಆಟಗಾರ ಶಕಿಬ್ ಅಲ್ ಹಸನ್ಗೆ ತಂಡದ ಸಹ ಆಟಗಾರರು ಹೃದಯ ಸ್ಪರ್ಶಿ ಸಂದೇಶದ ಮೂಲಕ ಧೈರ್ಯ ತುಂಬಿದ್ದಾರೆ.
ಮೂರು ಬಾರಿ ಬುಕ್ಕಿಯೊಬ್ಬ ಮ್ಯಾಚ್ ಫಿಕ್ಸಿಂಗ್ಗಾಗಿ ತಮ್ಮನ್ನು ಸಂಪರ್ಕಿಸಿದ್ದ ವಿಚಾರವನ್ನು ಐಸಿಸಿಯಿಂದ ಮುಚ್ಚಿಟ್ಟ ಆರೋಪದ ಮೇಲೆ ಶಕಿಬ್ರನ್ನು ಐಸಿಸಿ ಎಲ್ಲ ಮಾದರಿ ಕ್ರಿಕೆಟ್ನಿಂದ ಎರಡು ವರ್ಷ ನಿಷೇಧಕ್ಕೊಳಪಡಿಸಿದೆ. ವಿಶ್ವಶ್ರೇಷ್ಠ ಆಲ್ರೌಂಡರ್ ಜೊತೆ ಹಲವಾರು ವರ್ಷಗಳ ಬಾಂಧವ್ಯ ಹೊಂದಿರುವ ಕ್ರಿಕೆಟಿಗರಾದ ಮುಸ್ಫೀಕರ್ ರಹೀಮ್, ಮೊರ್ತಜಾ ಸೇರಿದಂತೆ ಹಲವು ಕ್ರಿಕೆಟಿಗರು ತಮ್ಮ ಗೆಳಯನಿಗೆ ಧೈರ್ಯ ತುಂಬಿದ್ದಾರೆ.
"ಸುಮಾರು 18 ವರ್ಷಗಳ ಕಾಲ ಜೊತೆಯಾಗಿ ಇಬ್ಬರು ಕ್ರಿಕೆಟ್ ಆಡಿದ್ದೇವೆ. ಆದರೆ, ಇಂದು ನಿನ್ನನ್ನು ಬಿಟ್ಟು ಮೈದಾನದಲ್ಲಿರುತ್ತೇನೆ ಎಂದು ನೆನೆಸಿಕೊಂಡರೆ ನೋವಾಗುತ್ತಿದೆ. ಆದರೆ, ಮತ್ತೆ ನೀನು ಬಲಿಷ್ಠನಾಗಿ ಬರುತ್ತೀಯ ಎಂಬ ವಿಶ್ವಾಸದಲ್ಲಿದ್ದೇನೆ, ನಿನಗೆ ನನ್ನ ಹಾಗೂ ಬಾಂಗ್ಲಾದೇಶದ ಬೆಂಬಲ ಸದಾ ಇರುತ್ತದೆ" ಎಂದು ರಹೀಮ್ ಇನ್ಸ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ವೇಗಿ ಮುಸ್ತಫಜುರ್ ರಹಮಾನ್, "ನೀನು ಇಲ್ಲದೇ ಕ್ರಿಕೆಟ್ ಆಡಲಿದ್ದೇವೆ ಎಂಬುದನ್ನು ನಂಬುವುದಕ್ಕೂ ಆಗುತ್ತಿಲ್ಲ. ಆದರೆ, ನೀನು ಮತ್ತೆ ತಂಡಕ್ಕೆ ಸೇರಿಕೊಳ್ಳುತ್ತೀಯ ಎಂಬುದರ ಬಗ್ಗೆ ನನಗೆ ವಿಶ್ವಾಸವಿದೆ. ಆ ದಿನಕ್ಕಾಗಿ ನಾವು ಕಾಯುತ್ತಿದ್ದೇವೆ" ಎಂದು ಟ್ವಿಟರ್ನಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.
ಇನ್ನು ಏಕದಿನ ತಂಡದ ನಾಯಕ ಮೊರ್ತಜಾ "13 ವರ್ಷಗಳ ಸುದೀರ್ಘವಾಗಿ ಹೋರಾಡಿರುವ ನಾನು ಖಂಡಿತವಾಗಿಯೂ ಕೆಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತೇನೆ. ಆದರೆ ಸ್ವಲ್ಪ ದಿನಗಳ ನಂತರ ನಾವು ನೆಮ್ಮದಿಯಿಂದ ಮಲಗುತ್ತೇವೆ ಎಂಬುದು ಗೊತ್ತಿದೆ. ಏಕೆಂದರೆ 2023 ರ ವಿಶ್ವಕಪ್ನಲ್ಲಿ ಅವನ ನಾಯಕತ್ವದಲ್ಲಿ ನಾವು ಫೈನಲ್ ಆಡುತ್ತೇವೆ ಎಂಬ ನಂಬಿಕೆಯಿದೆ. ಅದಕ್ಕೆ ಶಕಿಬ್ ಅಲ್ ಹಸನ್ ಕಾರಣರಾಗಲಿದ್ದಾರೆ" ಎಂದು ಮೊರ್ತಜಾ ಫೇಸ್ಬುಕ್ನಲ್ಲಿ ಸ್ನೇಹಿತನಿಗೆ ಧೈರ್ಯ ತುಂಬುವ ಸಂದೇಶವನ್ನು ಬರೆದುಕೊಂಡಿದ್ದಾರೆ.
ಇವರಷ್ಟೇ ಅಲ್ಲದೆ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಕೂಡ ನಿನ್ನೆ ಬಿಸಿಬಿಗೆ ಶಕಿಬ್ರನ್ನು ಬೆಂಬಲಿಕ್ಕೆ ನಿಲ್ಲಬೇಕು, ಅವರು ಮತ್ತೆ ತಂಡಕ್ಕೆ ಸೇರಿಕೊಂಡು ಇನ್ನಷ್ಟು ವರ್ಷ ಸೇವೆ ಸಲ್ಲಿಸಲು ನೆರವಾಗಬೇಕು ಎಂದು ತಿಳಿಸಿದ್ದರು.