ಡುನೆಡಿನ್: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ಭರ್ಜರಿ 8 ಸಿಕ್ಸರ್ ಸಿಡಿಸಿದ ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಮಾರ್ಟಿನ್ ಗಪ್ಟಿಲ್ 50 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 97 ರನ್ಗಳಿಸಿ ತಂಡ 219 ರನ್ಗಳ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು. ಪ್ರತಿ ಹೋರಾಟ ನಡೆಸಿದ ಆಸ್ಟ್ರೇಲಿಯಾ 215 ರನ್ಗಳಿಸಿ ಕೇವಲ 4 ರನ್ಗಳಿಂದ ಸೋಲು ಕಂಡಿತ್ತು.
ಈ ಪಂದ್ಯದಲ್ಲಿ 8 ಸಿಕ್ಸರ್ ಸಿಡಿಸಿದ ಗಪ್ಟಿಲ್ ಭಾರತ ತಂಡದ ರೋಹಿತ್ ಶರ್ಮಾರ ಗರಿಷ್ಠ ಸಿಕ್ಸರ್ ದಾಖಲೆಯನ್ನು ಮುರಿದರು. ಗಪ್ಟಿಲ್ 96 ಟೆಸ್ಟ್ ಪಂದ್ಯಗಳಲ್ಲಿ 132 ಸಿಕ್ಸರ್ ಸಿಡಿಸಿದ್ದರೆ, ರೋಹಿತ್ ಶರ್ಮಾ 108 ಪಂದ್ಯಗಳಲ್ಲಿ 127 ಸಿಕ್ಸರ್ ಸಿಡಿಸಿ 2ನೇ ಸ್ಥಾನ ಪಡೆದಿದ್ದಾರೆ.
ಇವರಿಬ್ಬರನ್ನು ಹೊರತುಪಡಿಸಿದರೆ, ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ 97 ಪಂದ್ಯಗಳಲ್ಲಿ 113 , ಕಿವೀಸ್ನ ಕಾಲಿನ್ ಮನ್ರೋ 65 ಪಂದ್ಯಗಳಲ್ಲಿ 107 , ಕ್ರಿಸ್ ಗೇಲ್ 58 ಪಂದ್ಯಗಳಿಂದ 105 ಸಿಕ್ಸರ್ ಸಿಡಿಸುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ 100 ಸಿಕ್ಸರ್ ಗಡಿದಾಟಿರುವ ಬ್ಯಾಟ್ಸ್ಮನ್ಗಳಾಗಿದ್ದಾರೆ.
ಇದನ್ನು ಓದಿ:ಆಸ್ಟ್ರೇಲಿಯಾ ವಿರುದ್ಧ 4 ರನ್ಗಳ ರೋಚಕ ಜಯ ಸಾಧಿಸಿದ ನ್ಯೂಜಿಲ್ಯಾಂಡ್