ಸಿಡ್ನಿ:ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್ಮನ್ ಮಾರ್ನಸ್ ಲಾಬುಶೇನ್ ಓರ್ವ 'ವಿಶೇಷ' ಆಟಗಾರ ಎಂದು ಕರೆದಿದ್ದಾರೆ.
ಸಚಿನ್, ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಕ್ಕೆ ತೆರಲಿದ್ದಾರೆ. ಕಾಂಗಾರೂ ನಾಡಿನಲ್ಲಿ ಮಾತನಾಡಿರುವ ಅವರು, ನಾನು ಲಾರ್ಡ್ಸ್ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವಿರುದ್ಧದ ಪಂದ್ಯವನ್ನ ನನ್ನ ಮಾವನ ಜೊತೆ ನೋಡುತ್ತಿದ್ದೆ. ಸ್ಟೀವ್ ಸ್ಮೀತ್ ಗಾಯಗೊಂಡ ನಂತರ, ಲಾಬುಶೇನ್ ಎರಡನೇ ಇನ್ನಿಂಗ್ಸ್ನಲ್ಲಿ ಜೋಫ್ರಾ ಆರ್ಚರ್ ಎಸೆದ 2ನೇ ಎಸೆತದಿಂದ ಹೊಡೆಯಲು ಪ್ರಾರಂಭಿಸಿದ್ದನ್ನ ನೋಡಿದೆ. ಅವರು ಬ್ಯಾಟಿಂಗ್ ಪ್ರಾರಂಭಮಾಡಿದ 15 ನಿಮಿಷಗಳಲ್ಲಿ, ಈ ಆಟಗಾರನು ವಿಶೇಷವಾಗಿ ಕಾಣಿಸುತ್ತಾನೆ ಎಂದು ಹೇಳಿದೆ.
'ಬ್ಯಾಟಿಂಗ್ ಮಾಡುವಾಗ ಅವರ ಫೂಟ್ವರ್ಕ್ ಉತ್ತಮವಾಗಿರುತ್ತದೆ. ಪೂಟ್ವರ್ಕ್ ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ್ದಲ್ಲ. ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು. ನಿಮ್ಮಲ್ಲಿ ಸಕಾರಾತ್ಮಕ ಆಲೋಚನೆ ಬಾರದ ಇದ್ದರೆ, ನಿಮ್ಮ ಕಾಲು ಅಲುಗಾಡಲು ಸಾಧ್ಯವಿಲ್ಲ. ಈದೇ ಕಾರಣಕ್ಕೆ ಲಾಬುಶೇನ್ ವಿಶೇಷ ಎನ್ನಿಸಿದ್ದು' ಎಂದು ಸಚಿನ್ ಹೇಳಿದ್ದಾರೆ.
ಯಾವ ಆಟಗಾರನ್ನನ ನೋಡಿದಾಗ ನಿಮಗೆ ನಿಮ್ಮ ನೆನಪಾಗುತ್ತದೆ ಎಂದರೆ, ಲಾಬುಶೇನ್ ಆಟವನ್ನ ನೋಡಿದರೆ ನನಗೆ ನನ್ನ ಆಟ ನೆನಪಾಗುತ್ತದೆ ಎಂದಿದ್ದಾರೆ.
ತವರಿನಲ್ಲಿ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಲಾಬುಶೇನ್ 869 ರನ್ ಗಳಿಸಿದ್ದರು. ಪಂದ್ಯದಿಂದ ಪಂದ್ಯಕ್ಕೆ ರ‍್ಯಾಂಕಿಂಗ್‌ನಲ್ಲಿ ಜಿಗಿತ ಕಾಣುತ್ತಿರುವ ಲಾಬುಶೇನ್ ಒಂದೇ ವರ್ಷದಲ್ಲಿ 82 ರ್ಯಾಂಕ್ನಿಂದ 8 ಪಂದ್ಯಗಳ ಅಂತರದಲ್ಲಿ 3 ನೇ ಸ್ಥಾನಕ್ಕೇರಿದ್ದಾರೆ.