ಮೆಲ್ಬೋರ್ನ್:ಪ್ರಸಕ್ತ ಸಾಲಿನಲ್ಲಿ ಟೆಸ್ಟ್ ಕ್ರಿಕೆಟ್ನ ಅತಿ ಹೆಚ್ಚು ರನ್ಗಳಿಸಿರುವ ಮಾರ್ನಸ್ ಲಾಬುಶೇನ್ಗೆ ಏಕದಿನ ತಂಡದಲ್ಲೂ ಅವಕಾಶ ನೀಡಿದ್ದಾರೆ.
ಮುಂದಿನ ವರ್ಷ ಜನವರಿ 14 ರಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ 14 ಆಟಗಾರರ ತಂಡ ಪ್ರಕಟಿಸಿದ್ದು, ಟೆಸ್ಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಲಾಬುಶೇನ್ ಸೀಮಿತ ಓವರ್ಗಳ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ. ಈ ವಿಚಾರವನ್ನು ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವರ್ ಹೋನ್ಸ್ ತಿಳಿಸಿದ್ದಾರೆ.
ಮುಂದಿನ ವರ್ಷ ಟಿ20 ವಿಶ್ವಕಪ್ ಇರುವುದರಿಂದ ಈಗಿನಿಂದಲೇ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ಅಲ್ಲದೆ 2023 ರ ವಿಶ್ವಕಪ್ ದೃಷ್ಠಿಕೋನದಲ್ಲೂ ತಂಡವನ್ನು ಬಲಿಷ್ಠಗೊಳಿಸಲು ಮಾರ್ನಸ್ ಲಾಬುಶೇನ್ಗೆ ಅವಕಾಶ ನೀಡಲಾಗಿದೆ. ಅವರು ಕ್ವೀನ್ಸ್ಲ್ಯಾಂಡ್ ಪರ ವೈಟ್ಬಾಲ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿರುವುದರಿಂದ ಅವರ ಮೇಲೆ ಭರವಸೆ ಹೆಚ್ಚಾಗಿದೆ ಎಂದು ಹೋನ್ಸ್ ಹೇಳಿದರು.
ಮಾರ್ನಸ್ ಲಾಬುಶೇನ್ 2019 ರಲ್ಲಿ 10 ಟೆಸ್ಟ್ ಪಂದ್ಯಗಳಲ್ಲಿ 15 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿರುವ ಮಾರ್ನಸ್ ಲಾಬುಶೇನ್ ಸಾವಿರ(1022) ರನ್ ಗಡಿದಾಟಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಲ್ಲದೆ ಹಾಗೂ 2019ರಲ್ಲಿ ಅತಿ ಹೆಚ್ಚು ರನ್ಗಳಿಸಿದ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ಕಿಂಗ್ ಸ್ಟಿವ್ ಸ್ಮಿತ್ , ಕೊಹ್ಲಿ, ಜೋ ರೂಟ್, ವಿಲಿಯಮ್ಸನ್ ಅವರೆನ್ನಲ್ಲಾ ಹಿಂದಿಕ್ಕಿದ್ದಾರೆ.