ಪರ್ತ್:ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ ಟೆಸ್ಟ್ ಕ್ರಿಕೆಟ್ನಲ್ಲಿ ದಿನದಿಂದ ದಿನಕ್ಕೆ ಅತ್ಯುತ್ತಮ ಬ್ಯಾಟಿಂಗ್ ನಡೆಸುತ್ತಿದ್ದು, 2019ರಲ್ಲಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಕೊಹ್ಲಿ, ಸ್ಮಿತ್ ಹಿಂದಿಕ್ಕಿ 2019ರಲ್ಲಿ 1,000 ಟೆಸ್ಟ್ ರನ್ ಬಾರಿಸಿದ ಆಸೀಸ್ ಬ್ಯಾಟ್ಸ್ಮನ್!
ಆಸ್ಟ್ರೇಲಿಯಾದ ಮಾರ್ನಸ್ , ಮಾರ್ನಸ್ ಲಾಬುಶೇನ್ ಟೆಸ್ಟ್ ಕ್ರಿಕೆಟ್ನಲ್ಲಿ ದಿನದಿಂದ ದಿನಕ್ಕೆ ಅತ್ಯುತ್ತಮ ಬ್ಯಾಟಿಂಗ್ ನಡೆಸುತ್ತಿದ್ದು 2019ರಲ್ಲಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
2019 ರಲ್ಲಿ 10 ಟೆಸ್ಟ್ ಪಂದ್ಯಗಳಲ್ಲಿ 15 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿರುವ ಮಾರ್ನಸ್ ಲಾಬುಶೇನ್ ಸಾವಿರ(1022) ರನ್ ಗಡಿದಾಟಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಲ್ಲದೆ ಹಾಗೂ 2019ರಲ್ಲಿ ಅತಿ ಹೆಚ್ಚು ರನ್ಗಳಿಸಿದ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ಕಿಂಗ್ ಸ್ಟಿವ್ ಸ್ಮಿತ್ , ಕೊಹ್ಲಿ, ಜೋ ರೂಟ್, ವಿಲಿಯಮ್ಸನ್ ಅವರೆನ್ನಲ್ಲಾ ಹಿಂದಿಕ್ಕಿದ್ದಾರೆ.
ಮಾರ್ನಸ್ ಲಾಬುಶೇನ್ 3 ಶತಕ ಹಾಗೂ 6 ಅರ್ಧಶತಕಗಳನ್ನು ಕೂಡ ಸಿಡಿಸಿದ್ದಾರೆ. ಇವರ ನಂತರ ಎರಡನೇ ಸ್ಥಾನದಲ್ಲಿರುವ ಸ್ಟಿವ್ ಸ್ಮಿತ್ 7 ಪಂದ್ಯಗಳಿಂದ 873, ಜೋ ರೂಟ್ 11 ಪಂದ್ಯಗಳಿಂದ 774, ಬೆನ ಸ್ಟೋಕ್ಸ್ 10 ಪಂದ್ಯಗಳಿಂದ 754, ಮಯಾಂಕ್ ಅಗರ್ವಾಲ್ 8 ಪಂದ್ಯಗಳಿಂದ 754 ರನ್ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.