ಡರ್ಬನ್ :ಪಾಕಿಸ್ತಾನ್ ವಿರುದ್ಧ ಏಕದಿನ ಸರಣಿಯನ್ನು 3-0ಯಲ್ಲಿ ಗೆದ್ದು ಕ್ಲೀನ್ ಸ್ವೀಪ್ ಮಾಡಿದ್ದ ದಕ್ಷಿಣ ಆಫ್ರಿಕಾ ವನಿತೆಯರ ತಂಡ, ಟಿ20 ಯಲ್ಲೂ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ.
ಡರ್ಬನ್ನಲ್ಲಿ ಶುಕ್ರವಾರ ರಾತ್ರಿ(ಭಾರತೀಯ ಕಾಲಮಾನ) ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕೇವಲ 128 ರನ್ಗಳಿಗೆ ಕಟ್ಟಿ ಹಾಕಿತು. ಆಲ್ರೌಂಡಟರ್ ಮರಿಝಾನ್ ಕಾಪ್ ಕೇವಲ 24ರನ್ ನೀಡಿ 3 ವಿಕೆಟ್ ಪಡೆದ್ರೆ, ಶಬ್ನಿಮ್ ಇಸ್ಮಾಯಿಲ್ 2 ವಿಕೆಟ್ ಪಡೆದು ಮಿಂಚಿದರು.
ಪಾಕಿಸ್ತಾನ ಪರ ಆಯೇಷಾ ನಸೀಮ್ 32, ಕೈನತ್ ಇಮ್ತುಯಾಜ್ 24, ನಿಡಾ ದಾರ್ 22 ಹಾಗೂ ಮುನೀಬಾ ಅಲಿ 21 ರನ್ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
125 ರನ್ಗಳ ಸುಲಭ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ19 ಓವರ್ಗಳಲ್ಲಿ 2 ವಿಕೆಟ್ ಪಡೆದುಕೊಂಡು ಗುರಿ ತಲುಪಿತು. ತಾಜ್ಮಿನ್ ಬ್ರಿಟ್ಸ್ ಅಜೇಯ 52 ರನ್ಗಳಿಸಿದ್ರೆ, ಮರಿಝಾನ್ ಕಾಪ್ 28 ಹಾಗೂ ಲಿಜೆಲ್ಲಾ ಲೀ 22 ರನ್ಗಳಿಸಿ ಗೆಲುವಿನ ರೂವಾರಿಗಳಾದರು.
ಆಲ್ರೌಂಡ್ ಪ್ರದರ್ಶನ ತೋರಿದ ಕಾಪ್ ಪಂದ್ಯ ಶ್ರೇಷ್ಠ ಪ್ರದರ್ಶನಕ್ಕೆ ಪಾತ್ರರಾದರು. ಎರಡು ತಂಡಗಳ ನಡುವಿನ 2ನೇ ಟಿ20 ಪಂದ್ಯ ಭಾನುವಾರ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ.