ಕರ್ನಾಟಕ

karnataka

ETV Bharat / sports

ಭಾರತ ತಂಡದ 4ನೇ ಕ್ರಮಾಂಕಕ್ಕೆ ಕನ್ನಡಿಗ ಮನೀಷ್​ ಪಾಂಡೆ ಸೂಕ್ತರಲ್ಲವೇ? - ಭಾರತ

ಮನೀಷ್​ ಬ್ಯಾಟಿಂಗ್​ ನಡೆಸಿರುವ 18 ಇನ್ನಿಂಗ್ಸ್​ನಲ್ಲಿ 6 ಬಾರಿ ನಾಟೌಟ್​ ಆಗಿದ್ದಾರೆ. ವೃತ್ತಿ ಜೀವನದಲ್ಲಿ ಬಾರಿಸಿರುವ ಎರಡು ಅರ್ಧಶತಕ ಹಾಗೂ ಒಂದು ಶತಕ ಕೂಡ ವಿದೇಶಗಳಲ್ಲಿ ನಡೆದ ಟೂರ್ನಿಯಲ್ಲಿ ಬಂದಿವೆ.

Manish Pandey

By

Published : Jul 17, 2019, 1:53 PM IST

ಮುಂಬೈ: ಭಾರತ ತಂಡದಲ್ಲಿ ಕಳೆದ 4 ವರ್ಷಗಳಿಂದ ಹೆಚ್ಚು ತಲೆನೋವಾಗಿರುವುದು ನಾಲ್ಕನೇ ಕ್ರಮಾಂಕ. ಈ ಕ್ರಮಾಂಕ್ಕೆ 10 ಕ್ಕೂ ಹೆಚ್ಚು ಆಟಗಾರರನ್ನೂ ಬದಲಾಯಿಸಲಾಯಿತು. ಆದರೆ ಇಲ್ಲಿ ಕಡಿಮೆ ಅವಕಾಶ ನೀಡದೆ ತಂಡದಿಂದ ಹೊರದೂಡಲ್ಪಟ್ಟವರಲ್ಲಿ ಮನೀಷ್​ ಪಾಂಡ್ಯ ಕೂ ಒಬ್ಬರು.

ಮನೀಷ್​ ಪಾಂಡೆ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಲಿಸ್ಟ್​ ಎ ಕ್ರಿಕೆಟ್​ನಲ್ಲಿ 4504 ರನ್​ಗಳಿಸಿದ್ದಾರೆ . ಇದರಲ್ಲಿ 9 ಶತಕ 29 ಅರ್ಧಶತಕ ಸೇರಿದೆ. ಇವರ ಬ್ಯಾಟಿಂಗ್​ ಸರಾಸರಿ 43,31 ಇದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವಕಾಶ ಸಿಕ್ಕಿದ್ದು ಮಾತ್ರ 3 ವರ್ಷಗಳಲ್ಲಿ 23 ಪಂದ್ಯದಲ್ಲಿ ಮಾತ್ರ. ಅದರಲ್ಲಿ ಬ್ಯಾಟಿಂಗ್​ ಸಿಕ್ಕಿದ್ದು 18 ಇನ್ನಿಂಗ್ಸ್​ನಲ್ಲಿ. ದುರಂತವೆಂದರೆ ಇದರಲ್ಲೂ ಇನ್ನಿಂಗ್ಸ್​ ಮುಕ್ತಾಯದ ಕೊನೆಯಲ್ಲಿ ಮನೀಷ್​ಗೆ ಬ್ಯಾಟಿಂಗ್​ ಬಂದಿರುವುದೇ ಹೆಚ್ಚು.

ಮನೀಷ್​ ಪಾಂಡೆ

ಆದರೆ ಸಿಕ್ಕ ಕೆಲವು ಅವಕಾಶಗಳಲ್ಲಿ ಮನೀಷ್​ ಉತ್ತಮವಾಗಿ ಆಡಿದ್ದಾರೆ. 4ನೇ ಕ್ರಮಾಂಕದಲ್ಲಿ ವಿದೇಶದಲ್ಲಿ ಶತಕ ಸಿಡಿಸಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಯೂ ಮನೀಷ್​ ಹೆಸರಿನಲ್ಲಿದೆ. ಆದರೆ ಮನೀಷ್​ರನ್ನು ಆಯ್ಕೆ ಮಾಡಿರುವ ಸರಣಿಗಳಲ್ಲಿ ಬೆಂಚ್​ ಕಾಯ್ದಿರುವುದೇ ಹೆಚ್ಚು. ಒಂದು ವೇಳೆ ಅವಕಾಶ ಸಿಕ್ಕಿದೆ ಎಂಬುವುದನ್ನು ಪರಿಗಣನೆಗೆ ತೆಗೆದುಕೊಂಡರೆ, ಆ ಸರಣಿಯನ್ನು ಭಾರತ ಗೆದ್ದನಂತರ ಔಪಚಾರಿಕ ಎಂದೆನಿಸುವ ಪಂದ್ಯಗಳಲ್ಲಿ ಮಾತ್ರ ಮನೀಷ್​ಗೆ ಆಡುವ 11 ರಲ್ಲಿ ಬ್ಯಾಟಿಂಗ್​ ಸಿಕ್ಕಿದೆ. ಅದರಲ್ಲಿ ಮನೀಷ್​ ಅಲ್ಪ ಮೊತ್ತಕ್ಕೆ ಔಟಾಗಿರುವುದನ್ನು ಮಾತ್ರ ಆಯ್ಕೆ ಸಮಿತಿ ಪರಿಗಣನೆಗೆ ತೆಗೆದುಕೊಂಡಿದೆ.

ಮನೀಷ್​ ಬ್ಯಾಟಿಂಗ್​ ನಡೆಸಿರುವ 18 ಇನ್ನಿಂಗ್ಸ್​ನಲ್ಲಿ 6 ಬಾರಿ ನಾಟೌಟ್​ ಆಗಿದ್ದಾರೆ. ವೃತ್ತಿ ಜೀವನದಲ್ಲಿ ಬಾರಿಸಿರುವ ಎರಡು ಅರ್ಧಶತಕ ಹಾಗೂ ಒಂದು ಶತಕ ಕೂಡ ವಿದೇಶಗಳಲ್ಲಿ ನಡೆದ ಟೂರ್ನಿಯಲ್ಲಿ ಬಂದಿವೆ.

ಈಗಾಗಲೆ ಭಾರತ ತಂಡದಿಂದ ಹೊರಬಿದ್ದ ಮೇಲೆ ಭಾರತ ಎ ತಂಡದ ನಾಯಕತ್ವ ವಹಿಸಿಕೊಂಡಿರುವ ಮನೀಷ್​ ಪಾಂಡೆ ಅದ್ಭುತ ಪಾರ್ಮ್​ನಲ್ಲಿದ್ದು ಕಳೆದ ವರ್ಷ ನ್ಯೂಜಿಲ್ಯಾಂಡ್​ ಎ ವಿರುದ್ಧ, ಆಸ್ಟ್ರೇಲಿಯಾ ಎ, ದಕ್ಷಿಣ ಆಫ್ರಿಕಾ ಎ ತಂಡಗಳನ್ನೊಳಗೊಂಡ ಚತುಷ್ಕೋನ ಏಕದಿನ ಸರಣಿ ಹಾಗೂ ಇದೀಗ ವಿಂಡೀಸ್​ ಎ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಂದು ಸರಣಿಯಲ್ಲೂ ಪಾಂಡೆ ಶತಕ ದಾಖಲಿಸುತ್ತಿದ್ದಾರೆ. ಜೊತೆಗೆ ಕಳೆದ ಐಪಿಎಲ್​ನಲ್ಲೂ ಸ್ಫೋಟಕ ಬ್ಯಾಟಿಂಗ್​ ನಡೆಸಿರುವ ಪಾಂಡೆ 4ನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರ ಎಂಬುವುದರಲ್ಲಿ ಎರಡು ಮಾತಿಲ್ಲ.

ಇದೀಗ ಧೋನಿ ನಿವೃತ್ತಿ ಹೊಂದುವ ಸಾಧ್ಯತೆಯಿದ್ದು ಮನೀಷ್​ ಪಾಂಡೆಯಂತಹ ಅನುಭವಿ ಆಟಗಾರನನ್ನು ಮಧ್ಯಮ ಕ್ರಮಾಂಕಕ್ಕೆ ಸೇರ್ಪಡೆಗೊಂಡರೆ ನಿಜಕ್ಕೂ ಭಾರತ ತಂಡ ಬಲಿಷ್ಠವಾಗಲಿದೆ.

ABOUT THE AUTHOR

...view details