ಕರ್ನಾಟಕ

karnataka

ETV Bharat / sports

ಮನೀಶ್​ ಪಾಂಡೆಯಿಂದ ಥ್ರಿಲ್ಲಿಂಗ್​​ ಫಿಲ್ಡಿಂಗ್​​... ಕ್ಷೇತ್ರ ರಕ್ಷಣೆ ಅಭ್ಯಾಸದ ವಿಡಿಯೋ ಶೇರ್​ ಮಾಡಿದ ಬಿಸಿಸಿಐ! - ಮನೀಶ್​ ಪಾಂಡೆಯಿಂದ ಥ್ರಿಲ್ಲಿಂಗ್​​ ಫಿಲ್ಡಿಂಗ್

ಟೀಂ ಇಂಡಿಯಾದ ಅದ್ಭುತ ಕ್ಷೇತ್ರ ರಕ್ಷಕ ಮನೀಶ್​​ ಪಾಂಡೆ ಮೈದಾನದಲ್ಲಿ ಥ್ರಿಲ್ಲಿಂಗ್​​ ಕ್ಷೇತ್ರರಕ್ಷಣೆ ಮಾಡಿರುವ ವಿಡಿಯೋ ಇದೀಗ ಬಿಸಿಸಿಐನಿಂದ ಶೇರ್​ ಆಗಿದೆ.

Manish Pandey Dazzles In High-Intensity Fielding Practice
ಮನೀಶ್​ ಪಾಂಡೆಯಿಂದ ಥ್ರಿಲ್ಲಿಂಗ್​​ ಫಿಲ್ಡಿಂಗ್

By

Published : Dec 17, 2019, 7:46 PM IST

ವೈಜಾಗ್​​: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಮನೀಶ್​ ಪಾಂಡೆ ಓರ್ವ ಅದ್ಭುತ ಕ್ಷೇತ್ರ ರಕ್ಷಕ ಎಂಬುದು ಈ ಹಿಂದಿನಿಂದಲೂ ಗೊತ್ತಿರುವ ಸಂಗತಿ. ಅವರು ಮೈದಾನದಲ್ಲಿ ಫಿಲ್ಡಿಂಗ್​ ಮಾಡಲು ಇಳಿದ್ರೆ ಯಾವುದೇ ಕ್ಯಾಚ್​ ಮಿಸ್​ ಆಗಲ್ಲ.

ಇದೀಗ ವೆಸ್ಟ್​ ಇಂಡೀಸ್​ ವಿರುದ್ಧ ನಾಳೆ ಎರಡನೇ ಏಕದಿನ ಪಂದ್ಯ ನಡೆಯಲಿರುವ ಕಾರಣ ಮನೀಶ್​ ಪಾಂಡೆ ಕ್ಷೇತ್ರರಕ್ಷಣೆಯ ಅಭ್ಯಾಸದಲ್ಲಿ ನಿರಂತರವಾಗಿರುವ ವಿಡಿಯೋವನ್ನ ಭಾರತೀಯ ಕ್ರಿಕೆಟ್​ ಮಂಡಳಿ ಶೇರ್​ ಮಾಡಿದೆ. ಬೌಂಡರಿ ಗೆರೆಯಲ್ಲಿ ನಿಂತು ಕ್ಯಾಚ್​ ಹಿಡಿಯುವುದರಲ್ಲಿ ಮನೀಶ್ ಪಾಂಡೆ ನಿರಂತರಾಗಿದ್ದು, ಬೌಂಡರಿ ಲೈನ್​ನಲ್ಲಿ ಬರುವ ಕ್ಯಾಚ್​ ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬ ತರಬೇತಿ ಪಡೆದುಕೊಂಡಿದ್ದಾರೆ.

ಈಗಾಗಲೇ ಮೈದಾನದಲ್ಲಿ ಪಾಂಡೆ ಅನೇಕ ಸಲ ಥ್ರಿಲ್ಲಿಂಗ್​ ಕ್ಯಾಚ್​ ಪಡೆದುಕೊಂಡು ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.

ABOUT THE AUTHOR

...view details