ಶಾರ್ಜಾ: ಸನ್ರೈಸರ್ಸ್ ತಂಡದ ಬ್ಯಾಟ್ಸ್ಮನ್ ಕನ್ನಡಿಗ ಮನೀಶ್ ಪಾಂಡೆ ಐಪಿಎಲ್ನಲ್ಲಿ 3,000 ರನ್ ಪೂರೈಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ 10 ರನ್ಗಳಿಸುತ್ತಿದ್ದಂತೆ ಮನೀಶ್ ಪಾಂಡೆ ಈ ಮೈಲುಗಲ್ಲನ್ನು ತಲುಪಿದರು. ಈ ಮೂಲಕ ಐಪಿಎಲ್ನಲ್ಲಿ 3 ಸಾವಿರ ಪೂರೈಸಿದ 16 ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಮನೀಶ್ ಪಾಂಡೆ 137 ಪಂದ್ಯಗಳನ್ನಾಡಿದ್ದು, ಇದರಲ್ಲಿ 127 ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಅವರು 16 ಅರ್ಧಶತಕಗಳು ಹಾಗೂ ಒಂದು ಶತಕ ಸಿಡಿಸಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ಪಾಂಡೆ ಹೆಸರಲ್ಲಿದೆ.
ಐಪಿಎಲ್ನಲ್ಲಿ ಗರಿಷ್ಠ ರನ್ ಸಿಡಿಸಿರುವ ದಾಖಲೆ ಆರ್ಸಿಬಿ ತಂಡ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಅವರು 183 ಪಂದ್ಯಗಳಲ್ಲಿ 5 ಶತಕ ಹಾಗೂ 38 ಅರ್ಧಶತಕಗಳ ಸಹಿತ 5635 ರನ್ ಸಿಡಿಸಿದ್ದಾರೆ. ನಂತರದ ಸ್ಥಾನಗಳಲ್ಲಿ ರೈನಾ(5368), ರೋಹಿತ್ ಶರ್ಮಾ(5109), ಡೇವಿಡ್ ವಾರ್ನರ್(4973)ಇದ್ದಾರೆ.